ಬಾಲಿವುಡ್ ಜನಪ್ರಿಯ ಸಾಹಿತಿ ಯೋಗೇಶ್ ಗೌರ್ ನಿಧನ: ಗಣ್ಯರ ಸಂತಾಪ

ಬಾಲಿವುಡ್‌ನಲ್ಲಿ ಹಲವು ಜನಪ್ರಿಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದ ಗೀತ ರಚನಾಕಾರ ಯೋಗೇಶ್‌ ಗೌರ್‌ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಹಿಂದಿ ಚಿತ್ರರಂಗ ಅನೇಕರು ಸಂತಾಪ ಸೂಚಿಸಿದ್ದಾರೆ.
ಯೋಗೇಶ್ ಗೌರ್
ಯೋಗೇಶ್ ಗೌರ್
Updated on

ಮುಂಬಯಿ: ಬಾಲಿವುಡ್‌ನಲ್ಲಿ ಹಲವು ಜನಪ್ರಿಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದ ಗೀತ ರಚನಾಕಾರ ಯೋಗೇಶ್‌ ಗೌರ್‌ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಹಿಂದಿ ಚಿತ್ರರಂಗ ಅನೇಕರು ಸಂತಾಪ ಸೂಚಿಸಿದ್ದಾರೆ.

'ಕಹೀ ದೂರ್‌ ಜಬ್‌ ದಿನ್ ಡಲ್‌ ಜಾಯೆ...' ಮುಂತಾದ ಹಿಟ್‌ ಗೀತೆಗಳಿಗೆ ಸಾಹಿತ್ಯ ಬರೆಯುವ ಮೂಲಕ ಜನಪ್ರಿಯರಾಗಿದ್ದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಹಲವು ಧಾರಾವಾಹಿಗಳಿಗೂ ಅವರು ಬರಹಗಾರರಾಗಿ ಕೆಲಸ ಮಾಡಿದ್ದರು.

ಯೋಗೇಶ್‌ ಅಗಲಿಕೆಯ ಸುದ್ದಿ ತಿಳಿದು ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್‌ ಕಂಬನಿ ಮಿಡಿದಿದ್ದಾರೆ. 'ಅನೇಕ ಹೃದಯಸ್ಪರ್ಶಿ ಗೀತೆಗಳನ್ನು ಯೋಗೇಶ್‌ ಬರೆದಿದ್ದರು. ಅವರ ನಿಧನದ ವಿಷಯ ಈಗಷ್ಟೇ ತಿಳಿಯಿತು. ಅವರು ತುಂಬ ಶಾಂತ ಸ್ವಭಾವದ ವ್ಯಕ್ತಿ ಆಗಿದ್ದರು. ಅವರು ಬರೆದ ಅನೇಕ ಹಾಡುಗಳಿಗೆ ನಾನು ಧ್ವನಿ ನೀಡಿದ್ದೇನೆ. ಅವರಿಗೆ ನನ್ನ ಅಂತಿಮ ನಮನ' ಎಂದು ಲತಾ ಮಂಗೇಶ್ಕರ್‌ ಟ್ವೀಟ್‌ ಮಾಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com