ಹಿಂದಿ ಜನಪ್ರಿಯ 'ಸಿಐಡಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ದಿನೇಶ್ ಫಡ್ನಿಸ್ ವಿಧಿವಶ!

ಹಿಂದಿ ಜನಪ್ರಿಯ ಧಾರಾವಾಹಿ ಸಿಐಡಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಐಡಿ ನಟ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ ನಿಧನರಾಗಿದ್ದಾರೆ.
ದಿನೇಶ್ ಫಡ್ನಿಸ್
ದಿನೇಶ್ ಫಡ್ನಿಸ್

ಹಿಂದಿ ಜನಪ್ರಿಯ ಧಾರಾವಾಹಿ ಸಿಐಡಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಐಡಿ ನಟ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ ನಿಧನರಾಗಿದ್ದಾರೆ.

ಈ ಮಾಹಿತಿಯನ್ನು ಸಹ ನಟ ದಯಾನಂದ್ ಶೆಟ್ಟಿ ಖಚಿತಪಡಿಸಿದ್ದಾರೆ. ಡಿಸೆಂಬರ್ 1ರಂದು ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು.

ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂಬ ವರದಿಗಳು ವೈರಲ್ ಆಗಿದ್ದವು. ಡಿಸೆಂಬರ್ 1, ಶುಕ್ರವಾರ ರಾತ್ರಿ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಿಐಡಿಯ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಆದರೆ, ಫಡ್ನಿಸ್ ಅವರಿಗೆ ಹೃದಯಾಘಾತವಾಗಿಲ್ಲ, ಆದರೆ ಯಕೃತ್ತಿಗೆ ಹಾನಿಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಐಡಿ ಖ್ಯಾತಿಯ ದಯಾನಂದ ಶೆಟ್ಟಿ ನಂತರ ಸ್ಪಷ್ಟಪಡಿಸಿದರು.

ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಸಿಐಡಿಯ ಭಾಗವಾಗಿದ್ದರು, ಇದರಲ್ಲಿ ಅವರು ಇನ್ಸ್ಪೆಕ್ಟರ್ ಫ್ರೆಡೆರಿಕ್ಸ್ ಪಾತ್ರವನ್ನು ನಿರ್ವಹಿಸಿದರು ಮತ್ತು ಮನೆಮಾತಾದರು. ಅವರು ಅದಾಲತ್ ಶೋನಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದರು ಮತ್ತು ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾದಲ್ಲಿ ಇನ್ಸ್ಪೆಕ್ಟರ್ ಆಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com