ಟ್ರಾಫಿಕ್ ಕಿರಿಕಿರಿ, ಅಪರಿಚಿತನ ಬೈಕ್ ಏರಿ ಸರಿಯಾದ ವೇಳೆಗೆ ಶೂಟಿಂಗ್ ಸ್ಪಾಟ್ ತಲುಪಿದ ಅಮಿತಾಬ್!

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಾಣಿಜ್ಯ ನಗರಿ ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಪರಿಚಿತನ ಬೈಕ್ ಏರಿ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಪಾಟ್ ತಲುಪಿದ್ದಾರೆ. ಈ ಪೋಟೋವನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ 80 ವರ್ಷದ ಬಚ್ಚನ್, ಅಪರಿಚಿತ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ್ದಾರೆ. 
ಮೆಗಾಸ್ಟಾರ್ ಅಮಿತಾಭ್ ಬಚ್ಚನ್
ಮೆಗಾಸ್ಟಾರ್ ಅಮಿತಾಭ್ ಬಚ್ಚನ್
Updated on

ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಾಣಿಜ್ಯ ನಗರಿ ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಪರಿಚಿತನ ಬೈಕ್ ಏರಿ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಪಾಟ್ ತಲುಪಿದ್ದಾರೆ. ಈ ಪೋಟೋವನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ 80 ವರ್ಷದ ಬಚ್ಚನ್, ಅಪರಿಚಿತ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ್ದಾರೆ. 

ನೀವ್ಯಾರೊ ಗೊತ್ತಿಲ್ಲ. ನೀವು ನನ್ನನ್ನು ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ತಲುಪಿಸಿದ್ದೀರಿ. ಸಂಚಾರ ದಟ್ಟಣೆ ನಡುವೆಯೂ ನೀವು ವೇಗವಾಗಿ ಬೈಕ್ ಓಡಿಸಿ ನನ್ನನ್ನು ಸರಿಯಾದ ವೇಳೆಗೆ ತಲುಪುವಂತೆ ಮಾಡಿದ್ದೀರಿ. ಯೆಲ್ಲೊ ಶರ್ಟ್, ಶಾರ್ಟ್ ಮತ್ತು ಟೋಪಿ ಹಾಕಿಕೊಂಡಿರುವ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಹೃದಯ-ಕಣ್ಣಿನ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ. ಅಮಿತಾಭ್ ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ನಟಿ ಸಯಾನಿ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಹೆಲ್ಮೆಟ್ ಎಲ್ಲಿದೆ ಸಾರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಚ್ಚನ್ ಪ್ರಸ್ತುತ ರಿಭು ದಾಸ್‌ಗುಪ್ತಾ ನಿರ್ದೇಶನದ "ಸೆಕ್ಷನ್ 84" ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ನಾಗ್ ಅಶ್ವಿನ್ ಅವರ ವೈಜ್ಞಾನಿಕ ಚಲನಚಿತ್ರ "ಪ್ರಾಜೆಕ್ಟ್ ಕೆ" ನಲ್ಲಿ ಅಭಿನಯಿಸುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಹ-ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com