ಬಿಡುಗಡೆಯಾದ ಮೂರೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 'ಟೈಗರ್ 3' ಕಮಾಲ್; 146.25 ಕೋಟಿ ರೂ. ಕಲೆಕ್ಷನ್!

ಸಲ್ಮಾನ್ ಖಾನ್ ಮತ್ತು ಯಶ್ ರಾಜ್ ಫಿಲ್ಮ್ಸ್‌ಗೆ ಇದು ಸಂಭ್ರಮಾಚರಣೆಯ ಸಮಯ. ನವೆಂಬರ್ 12 ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾದ 'ಟೈಗರ್ 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಚಿತ್ರ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿಯೇ 100 ಕೋಟಿ ಕ್ಲಬ್‌ ಸೇರಿದೆ.
ಟೈಗರ್ 3 ಸಿನಿಮಾದ ಸ್ಟಿಲ್
ಟೈಗರ್ 3 ಸಿನಿಮಾದ ಸ್ಟಿಲ್
Updated on

ಮುಂಬೈ: ಸಲ್ಮಾನ್ ಖಾನ್ ಮತ್ತು ಯಶ್ ರಾಜ್ ಫಿಲ್ಮ್ಸ್‌ಗೆ ಇದು ಸಂಭ್ರಮಾಚರಣೆಯ ಸಮಯ. ನವೆಂಬರ್ 12 ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾದ 'ಟೈಗರ್ 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಚಿತ್ರ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿಯೇ 100 ಕೋಟಿ ಕ್ಲಬ್‌ ಸೇರಿದೆ.

ಚಿತ್ರ ಬಿಡುಗಡೆಯಾದ ಮೂರನೇ ದಿನದಲ್ಲಿ 42.50 ಕೋಟಿ ರೂ. ಗಳಿಸಿದ್ದು, ಒಟ್ಟು ದೇಶೀಯ ಬಾಕ್ಸ್ ಆಫೀಸ್ ಸಂಗ್ರಹವು 146.25 ಕೋಟಿ ರೂ. ಆಗಿದೆ ಎಂದು ಬಾಲಿವುಡ್ ಉದ್ಯಮದ ಟ್ರ್ಯಾಕರ್ ಸಕ್ನಿಲ್ಕ್ ಹೇಳಿದ್ದಾರೆ.

ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು ಮೊದಲ ದಿನ 44.50 ಕೋಟಿ ರೂ. ಗಳಿಸಿದೆ ಮತ್ತು ಎರಡನೇ ದಿನದಲ್ಲಿ 59.25 ಕೋಟಿ ರೂ. ಕಲೆಕ್ಷನ್ ಮಾಡಿದೆ. 

ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ನಿರ್ಮಾಣದ ಟೈಗರ್ 3 ಸಿನಿಮಾದಲ್ಲಿ ನಟಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಸಹ ನಟಿಸಿದ್ದಾರೆ. 

ಟೈಗರ್ 3 ಸಿನಿಮಾ 2017ರ 'ಟೈಗರ್ ಜಿಂದಾ ಹೈ' ಚಿತ್ರದ ಮುಂದುವರಿದ ಭಾಗವಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com