ಟೈಮ್ಸ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಗೆ ಅಗ್ರಸ್ಥಾನ

ಟೈಮ್ ಮ್ಯಾಗಜೀನ್‌ನ ಈ ವರ್ಷದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಶಾರುಖ್ ಖಾನ್
ಶಾರುಖ್ ಖಾನ್

ನವದೆಹಲಿ: ಟೈಮ್ ಮ್ಯಾಗಜೀನ್‌ನ ಈ ವರ್ಷದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ನಿಯತಕಾಲಿಕ ನಡೆಸಿದ ಸಮೀಕ್ಷೆಯಲ್ಲಿ, ಓದುಗರು ಟೈಮ್ ನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹವಾದ ವ್ಯಕ್ತಿಗಳಿಗೆ ಮತ ಹಾಕುತ್ತಾರೆ.

ಅಮೇರಿಕನ್ ಪ್ರಕಟಣೆಯ ಪ್ರಕಾರ, ಸಮೀಕ್ಷೆಯಲ್ಲಿ ಒಟ್ಟಪ 1.2 ಮಿಲಿಯನ್ ಮತಗಳು ಚಲಾವಣೆಯಾಗಿದ್ದು, ಶಾರುಖ್ ಖಾನ್ ಅವರು ಶೇಕಡಾ 4 ರಷ್ಟು ಮತ ಪಡೆದಿದ್ದಾರೆ.

ದೇಶದ ಇಸ್ಲಾಮಿಕ್ ಆಡಳಿತದ ವಿರುದ್ಧವಾಗಿ ಪ್ರತಿಭಟಿಸಿದ್ದ ಇರಾನ್ ಮಹಿಳೆಯರು ಶೇಕಡಾ 3 ರಷ್ಟು ಮತಗಳನ್ನು ಪಡೆಯುವ ಮೂಲಕ ಟೈಮ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ಜನವರಿಯಲ್ಲಿ ತೆರೆಕಂಡ ಶಾರುಖ್ ಖಾನ್ ಅವರ "ಪಠಾಣ್" ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು, ವಿಶ್ವದಾದ್ಯಂತ ಬರೋಬ್ಬರಿ 1 ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com