ತಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಪಾಪರಾಜಿಗಳಿಗೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಧನ್ಯವಾದ

ತಮ್ಮ ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಾಪರಾಜಿಗಳಿಗೆ ಉಡುಗೊರೆ ಹ್ಯಾಂಪರ್‌ಗಳನ್ನು ಕಳುಹಿಸಿದ್ದಾರೆ.
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
Updated on

ಮುಂಬೈ: ತಮ್ಮ ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಾಪರಾಜಿಗಳಿಗೆ ಉಡುಗೊರೆ ಹ್ಯಾಂಪರ್‌ಗಳನ್ನು ಕಳುಹಿಸಿದ್ದಾರೆ.

ಮಂಗಳವಾರ, ಪಾಪರಾಜಿಯೊಬ್ಬರು ನಟಿ ಮತ್ತು ಕ್ರಿಕೆಟಿಗರಿಂದ ಪಡೆದ ಉಡುಗೊರೆಗಳ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಿಫ್ಟ್ ಹ್ಯಾಂಪರ್‌ನಲ್ಲಿ ಪವರ್ ಬ್ಯಾಂಕ್, ಪ್ರಯಾಣದ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ನೆರವಾಗುವಂತ ಸಣ್ಣ ಬ್ಯಾಗ್, ಸ್ಮಾರ್ಟ್ ವಾಚ್ ಮತ್ತು ನೀರಿನ ಬಾಟಲಿಗಳು ಸೇರಿವೆ.

ಉಡುಗೊರೆಯೊಂದಿಗೆ ಟಿಪ್ಪಣಿಯನ್ನು ಲಗತ್ತಿಸಲಾಗಿದ್ದು, 'ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ಯಾವಾಗಲೂ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು! ಪ್ರೀತಿಯಿಂದ ಅನುಷ್ಕಾ ಮತ್ತು ವಿರಾಟ್ ಎಂದು ಬರೆಯಲಾಗಿದೆ.

ವಿರುಷ್ಕಾ ದಂಪತಿ ನೀಡಿದ ಗಿಫ್ಟ್ ಹ್ಯಾಂಪರ್‌
ವಿರುಷ್ಕಾ ದಂಪತಿ ನೀಡಿದ ಗಿಫ್ಟ್ ಹ್ಯಾಂಪರ್‌

ವಿರಾಟ್ ಮತ್ತು ಅನುಷ್ಕಾ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು. 2021ರ ಜನವರಿ 11 ರಂದು ದಂಪತಿಗೆ ಪುತ್ರಿ ವಮಿಕಾ ಜನಿಸಿದರು. ಈ ವರ್ಷ ಫೆಬ್ರುವರಿ 15 ರಂದು ದಂಪತಿ ಮಗ ಅಕಾಯ್‌ಗೆ ಪೋಷಕರಾದರು.

ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು ಜನನ: ವಿಭಿನ್ನ ಹೆಸರಿಟ್ಟ ವಿರುಷ್ಕಾ ದಂಪತಿ!

ಮಗುವಿನ ಆಗಮನವನ್ನು ಪ್ರಕಟಿಸಿದ ಅನುಷ್ಕಾ ಮತ್ತು ವಿರಾಟ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ನಮ್ಮ ಹೃದಯವು ಸಂತೋಷ ಮತ್ತು ಪ್ರೀತಿಯಿಂದ ತುಂಬಿದೆ. ಫೆಬ್ರುವರಿ 15ರಂದು ನಾವು ನಮ್ಮ ಗಂಡು ಮಗು ಅಕಾಯ್/ವಮಿಕಾಳ ಸೋದರನನ್ನು ಈ ಪ್ರಪಂಚಕ್ಕೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ, ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದಿದ್ದರು.

ವಿರಾಟ್ ಮತ್ತು ಅನುಷ್ಕಾ ವಮಿಕಾ ಮತ್ತು ಅವರ ನವಜಾತ ಮಗ ಅಕಾಯ್ ಅನ್ನು ಮಾಧ್ಯಮದಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com