ಶಾಹಿದ್ ಅಫ್ರಿದಿ ನನ್ನ ಕ್ರಶ್: 'ಧುರಂಧರ್' ನಿರ್ದೇಶಕನ ಪತ್ನಿ ಯಾಮಿ ಹೇಳಿಕೆ ವೈರಲ್; ರಾಷ್ಟ್ರೀಯವಾದ ಬೂಟಾಟಿಕೆ ಎಂದ ನೆಟ್ಟಿಗರು

'ಧುರಂಧರ್ 2: ದಿ ರಿವೆಂಜ್ ಯಶಸ್ಸಿನ ಬೆನ್ನಲ್ಲೇ, ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ ಅವರು ಈ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ನನ್ನ ಕ್ರಶ್ ಎಂದು ಹೇಳಿರುವ ಹಳೆಯ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.
Yami Gautam’s Old Clip Of Crushing On Shahid Afridi Erupts Debate
ಶಾಹಿದ್ ಅಫ್ರಿದಿ - ಆದಿತ್ಯ ಧರ್ ಹಾಗೂ ಅವರ ಪತ್ನಿ ಯಾಮಿ ಗೌತಮ್
Updated on

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭರ್ಜರಿ ಯಶಸ್ಸು ಕಂಡಿದೆ.

'ಧುರಂಧರ್ 2: ದಿ ರಿವೆಂಜ್ ಯಶಸ್ಸಿನ ಬೆನ್ನಲ್ಲೇ, ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ ಅವರು ಈ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ನನ್ನ ಕ್ರಶ್ ಎಂದು ಹೇಳಿರುವ ಹಳೆಯ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಾಲಿವುಡ್ ದಂಪತಿ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರು ದೇಶಭಕ್ತಿ ಆಧಾರಿತ ಹಲವು ಚಿತ್ರಗಳಲ್ಲಿ ಆಗಾಗ್ಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಉರಿ: ದಿ ಸರ್ಜಿಕಲ್ ಸ್ಟ್ರೈಕ್, 'ಆರ್ಟಿಕಲ್ 370', ಧುರಂಧರ್ ಮತ್ತು ಧುರಂಧರ್ 2 ಈ ಚಿತ್ರಗಳಲ್ಲಿ ಸೇರಿವೆ. ಈ ಚಿತ್ರಗಳು ಭಯೋತ್ಪಾದನೆ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ನಿರೂಪಣೆಗಳ ವಿರುದ್ಧ ಬಲವಾದ ನಿಲುವನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಆದಿತ್ಯಧರ್ ನಿಜವಾದ ರಾಷ್ಟ್ರೀಯವಾದಿ ಚಿತ್ರ ನಿರ್ದೇಶಕ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಆರ್ಟಿಕಲ್ 370' ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಆದಿತ್ಯಧರ್ ಪತ್ನಿ ನಟಿ ಯಾಮಿ ಗೌತಮ್ ಸಹ ನಟಿಸಿದ್ದರು. ಇಬ್ಬರೂ ನಿಜವಾದ ರಾಷ್ಟ್ರೀಯವಾದಿಗಳು ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ.

Yami Gautam’s Old Clip Of Crushing On Shahid Afridi Erupts Debate
LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ ನೆರವು; ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಇದೀಗ ಯಾಮಿ ಗೌತಮ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈಗ ಮಹಾನ್ ರಾಷ್ಟ್ರೀಯವಾದಿ ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ಯಾಮಿ ಗೌತಮ್ ಒಂದ್ಕಾಲದಲ್ಲಿ ಪಾಕ್ ಕ್ರಿಕೆಟಿಗನ ಅಭಿಮಾನಿ ಆಗಿದ್ದರು. ಈಗ ಬೂಟಾಟಿಕೆ ಮಾತನಾಡುತ್ತಿದ್ದಾರೆ. ಅವರ ನಿಜ ಬಣ್ಣ ಇದು ಅಂತೆಲ್ಲಾ ವ್ಯಂಗ್ಯವಾಡುತ್ತಿದ್ದಾರೆ.

2014ರಲ್ಲಿ 'ಟೋಟಲ್ ಸಿಯಪ್ಪ' ಎಂಬ ಚಿತ್ರದಲ್ಲಿ ಯಾಮಿ ಗೌತಮ್ ನಾಯಕಿಯಾಗಿ ನಟಿಸಿದ್ದರು. ಚಿತ್ರದ ಪ್ರಚಾರದ ವೇಳೆ ಶಾಹಿದ್ ಅಫ್ರಿದಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದರು.

ಪಾಕ್ ಕ್ರಿಕೆಟಿಗೆ ಶಾಹಿದ್ ಅಫ್ರಿದಿ ಕಾಶ್ಮೀರ ವಿವಾದವನ್ನು ಪದೇ ಪದೆ ಕೆಣಕಿ ವಿವಾದ ಸೃಷ್ಟಿಸುತ್ತಿರುತ್ತಾರೆ. ಅಂತಹ ವ್ಯಕ್ತಿ ನನ್ನ ಕ್ರಶ್ ಎಂದು ಯಾಮಿ ಗೌತಮ್ ಹೇಳುತ್ತಿದ್ದರು. ಈಗ ನೋಡಿದ್ರೆ 'ಧುರಂಧರ್' ಸಿನಿಮಾ ಮಾಡಿ ಆದಿತ್ಯ- ಯಾಮಿ ಗೌತಮ್ ರಾಷ್ಟ್ರೀಯವಾದಿಗಳಾಗಿ ಬದಲಾಗಿಬಿಟ್ಟಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com