ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!

ತಮ್ಮ ದೀರ್ಘಕಾಲದ ಸಹೋದ್ಯೋಗಿಯಾಗಿರುವ ನಸೀರುದ್ದೀನ್ ಶಾ ಅವರಿಗೆ ಇತ್ತೀಚಿನ ಇತರ ರಾಷ್ಟ್ರೀಯ ವಿಷಯಗಳ ಬಗ್ಗೆಯೂ ಧ್ವನಿ ಎತ್ತುವಂತೆ ಪಿಯೂಷ್ ಮಿಶ್ರಾ ಆಗ್ರಹಿಸಿದ್ದಾರೆ.
Also talk about Captain Smit Machchhar: Piyush Mishra dares Naseeruddin Shah over CJP protest
ನಾಸಿರುದ್ದೀನ್ ಶಾ - ಪಿಯೂಷ್ ಮಿಶ್ರಾ
Updated on: 

ಮುಂಬೈ: 180 ಜನರ ಪ್ರಾಣವ ಉಳಿಸಿದ ಫ್ಲೈದುಬೈ' (flydubai) ಪೈಲಟ್, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಬಗ್ಗೆಯೂ ಸ್ವಲ್ಪ ಮಾತನಾಡಿ, ಅವರನ್ನೂ ಅಭಿನಂದಿಸಿ ಎಂದು ಬಾಲಿವುಡ್ ನಟ ಹಾಗೂ ಲೇಖಕ ಪಿಯೂಷ್ ಮಿಶ್ರಾ ಅವರು ಮುಂಬೈನಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ'(CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ನಟ ನಸೀರುದ್ದೀನ್ ಶಾ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ತಮ್ಮ ದೀರ್ಘಕಾಲದ ಸಹೋದ್ಯೋಗಿಯಾಗಿರುವ ನಸೀರುದ್ದೀನ್ ಶಾ ಅವರಿಗೆ ಇತ್ತೀಚಿನ ಇತರ ರಾಷ್ಟ್ರೀಯ ವಿಷಯಗಳ ಬಗ್ಗೆಯೂ ಧ್ವನಿ ಎತ್ತುವಂತೆ ಪಿಯೂಷ್ ಮಿಶ್ರಾ ಆಗ್ರಹಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ಶಿವಾಜಿ ಪಾರ್ಕ್‌ನಲ್ಲಿ ನಡೆದ CJP ಪ್ರತಿಭಟನೆಯಲ್ಲಿ ಶಾ ಭಾಗವಹಿಸಿದ್ದರು.

ಈ ಬಗ್ಗೆ ಮಿಶ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಸೀರುದ್ದೀನ್ ಶಾ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಹಲವು ಚುಚ್ಚುಮಾತುಗಳನ್ನಾಡಿದರು.

Also talk about Captain Smit Machchhar: Piyush Mishra dares Naseeruddin Shah over CJP protest
ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

"ಹೌದು ನಸೀರ್ ಸಾಹೇಬ್, ನಿಮಗೆ ನನ್ನ ನಮಸ್ಕಾರಗಳು. ನಾನು ಪಿಯೂಷ್ ಮಿಶ್ರಾ, ನಿಮ್ಮ ಹಳೆಯ ಪರಿಚಯಸ್ಥ," ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ ಮಿಶ್ರಾ, "ಸರ್, ಇತ್ತೀಚೆಗೆ ಟೆಲ್ ಅವಿವ್‌ನಿಂದ ಹೊರಟ 'ಫ್ಲೈ ದುಬೈ' ವಿಮಾನದಲ್ಲಿ ಒಂದು ದೊಡ್ಡ ದುರಂತ ತಪ್ಪಿತು... ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ತಮ್ಮ ಧೈರ್ಯದಿಂದ 180 ಜೀವಗಳನ್ನು ಉಳಿಸಿದರು. ದಯವಿಟ್ಟು ಅದರ ಬಗ್ಗೆಯೂ ಪ್ರತಿಕ್ರಿಯಿಸಿ ಮತ್ತು ಅವರನ್ನು ಅಭಿನಂದಿಸಿ ಸರ್" ಎಂದು ಕುಟುಕಿದ್ದಾರೆ.

ಇನ್ನು ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಶಾ ಹಿಂದೆ ನೀಡಿದ್ದ ಹೇಳಿಕೆ ಉಲ್ಲೇಖಿಸಿದ ಮಿಶ್ರಾ, 'ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ'ಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ಶಾ ಪ್ರತಿಕ್ರಿಯಿಸದಿರುವುದನ್ನೂ ಪ್ರಶ್ನಿಸಿದ್ದಾರೆ.

ಈ ಹಿಂದೆ ವಿದ್ಯಾರ್ಥಿ ಚಳುವಳಿಗಳ ಕುರಿತು ಶಾ ಅವರು ಆಡಿದ್ದ ಮಾತುಗಳನ್ನು ಮಿಶ್ರಾ ಈ ವೇಳೆ ನೆನಪಿಸಿಕೊಂಡಿದ್ದಾರೆ. ನೀವು ಹಿಂದೆ, ಈ ವಿದ್ಯಾರ್ಥಿಗಳು ನನಗೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಕಲಿಸಿದಷ್ಟೇ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದೀರಿ. ಈ ವಿದ್ಯಾರ್ಥಿಗಳು ಯಾವಾಗ ನಟನಾ ಶಿಕ್ಷಕರಾದರು ಎಂಬುದು ನನಗೆ ತಿಳಿಯುತ್ತಿಲ್ಲ. ಅದು ನಿಮಗೆ ಸಿಕ್ಕರೆ ದಯವಿಟ್ಟು ಬಹಿರಂಗಪಡಿಸಿ ಎಂದು ಮಿಶ್ರಾ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com