ಸಿನಿಮಾ ಲೇಖನ

ಅಮೆರಿಕದಲ್ಲಿ ಹಂಸಲೋಕ

ಅಮೆರಿಕದಲ್ಲಿ ಹಂಸಲೋಕ
Published On :

ನ್ಯೂಯಾರ್ಕ್‌ನ ಕನ್ನಡ ಕೂಟಕ್ಕೆ 40ನೇ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ಕಾರ್ಯಕ್ರಮದಲ್ಲಿ, ಅಲ್ಲಿ ಗಾನದ ಹೊಳೆ ಹರಿಸುತ್ತಿರುವವರು ಸಂಗೀತ ನಿರ್ದೇಶಕ ಹಂಸಲೇಖ ಮತ್ತು ತಂಡ. 'ಶಾಂತಿ ನುಡಿ ಕನ್ನಡ' ಎಂಬ ಉದ್ದೇಶವಿಟ್ಟುಕೊಂಡು 'ಹಂಸ'ದನಿ, ಅಲ್ಲಿ ಇಂಪು ತುಂಬಲಿದೆ. ಜು. 13ರಂದು ನ್ಯೂಯಾರ್ಕಿನ ಮ್ಯಾಡಿಸನ್‌ಥಿಯೇಟರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕೆನೆಕ್ಟಿಕಟ್- ಈ ತ್ರಿವಳಿ ರಾಜ್ಯಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಕನ್ನಡ ಕೂಟ, 1974ರಲ್ಲಿ ಸ್ಥಾಪನೆಯಾಯಿತು. ಕೂಟದ ಈ ಕಾರ್ಯಕ್ರಮದಲ್ಲಿ ಗಾಯಕಿಯರಾದ ಲತಾ ಹಂಸಲೇಖ, ಅನುರಾಧಾ ಭಟ್, ಚೇತನ್ (ಗಾಯಕ), ವೇಣುಗೋಪಾಲ ರಾಜು (ತಬಲ), ವೇಣು (ಕೀಬೋರ್ಡ್), ಶ್ರೀನಿವಾಸ್ ಆಚಾರ್ (ಗಿಟಾರ್) ಮತ್ತು ಮಂಜುನಾಥ್ (ರಿದಂ) ಅವರು ಹಂಸಲೇಖ ತಂಡದಲ್ಲಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.