ಸಿನಿಮಾ ಲೇಖನ

ಗೋವಿಂದ್‌ರ ಮಾಸ್ಟರ್ ಮೈಂಡ್

ಗೋವಿಂದ್‌ರ ಮಾಸ್ಟರ್ ಮೈಂಡ್
Published On :

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕುಮಾರ್ ಗೋವಿಂದ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಗೆಲ್ಲಲೇ ಬೇಕೆಂಬ ಪಣ ತೊಟ್ಟು ಬಂದಿದ್ದಾರೆ. ಹೀಗಾಗಿ ರೆಗ್ಯುಲರ್ ಸಿನಿಮಾ ಹೊರತಾಗಿ ಬೇರೊಂದು ಮಾದರಿ ಚಿತ್ರವನ್ನು ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ಇಟ್ಟ ಹೆಸರು 'ಮಾಸ್ಟರ್ ಮೈಂಡ್‌'.  ಸಿನಿಮಾಗೆ ತಲೆ ಖರ್ಚು ಮಾಡಿದರೆ ಕಲೆ ಉಳಿಯುತ್ತದೆಂಬ ನಂಬಿಕೆ ಅವರದ್ದು. ಅಲ್ಲದೆ ಈ ಬಾರಿ ಅವರು ಅಭಿನಯದ ಹೊರತಾಗಿ ಬೇರೆ ಎಲ್ಲ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅಂದರೆ ನಿರ್ಮಾಣ, ನಿರ್ದೇಶನ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಎಲ್ಲ ಅವರದ್ದೆ. ಇದೇ ಚಿತ್ರವನ್ನು ತೆಲುಗು, ತಮಿಳು, ಮಲೆಯಾಳಂನಲ್ಲೂ ಮಾಡುವ ಆಸೆ ಕುಮಾರ್ ಅವರದ್ದು. ಇತ್ತೀಚೆಗೆ ನಡೆದ ಮುಹೂರ್ತದಲ್ಲಿ ನಟ ಉಪೇಂದ್ರ ಕ್ಲಾಪ್ ಮಾಡಿದರು, ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯ್ ಕುಮಾರ್, ಬಿ.ಕೆ .ಶ್ರೀನಿವಾಸ್ ಚಿತ್ರತಂಡಕ್ಕೆ ಶುಭ ಕೋರಿದರು.
ರಾಜವರ್ಧನ್, ಕುಮಾರ್ ಚಿತ್ರದ ನಾಯಕರು. ಭಕ್ತಿ, ದಿವ್ಯಾ, ತಮನ್ನಾ ಚಿತ್ರದ ನಾಯಕಿಯರು. 'ನನ್ನ ಬ್ಯಾನರ್‌ನಲ್ಲಿ ಬರುತ್ತಿರುವ ಐದನೇ ಚಿತ್ರವಿದು. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ನೆಲೆಯಲ್ಲಿ ಸಾಗುವ ಈ ಚಿತ್ರ ಸಾಕಷ್ಟು ವಿಭಿನ್ನವಾಗಿದೆ ಎಂದು ಹೇಳಬಲ್ಲೆ. ನನ್ನದೇ ಸ್ಟೈಲಿನ ಚಿತ್ರವಿದು. ಬ್ಯಾಂಕಾಕ್‌ನಲ್ಲೂ ಚಿತ್ರೀಕರಣ ಮಾಡುವ ಯೋಚನೆ ಇದೆ. ಇಲ್ಲಿ ಯಾರು ಮಾಸ್ಟರ್ ಮೈಂಡ್ ಎನ್ನುವುದು ಗೊತ್ತಾಗಬೇಕು ಎಂದರೆ ಚಿತ್ರವನ್ನು ಕೊನೆ ತನಕ ನೋಡಬೇಕು. ಆ ಮಟ್ಟಿಗೆ ಕುತೂಹಲ ಮೂಡಿಸುವ ಚಿತ್ರವಿದು' ಎಂಬುದು ಕುಮಾರ್ ಗೋವಿಂದ್‌ರ ಮಾತು. ಇನ್ನು ನಾಯಕ ಮತ್ತು ನಾಯಕಿಯರು ಹೊಸಬರಾಗಿದ್ದರಿಂದ ತಮ್ಮ ಪಾತ್ರಗಳ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಕೆಲಸ ಸಾಹಸ ದೃಶ್ಯಗಳಿಗೆ   ಥಾಯ್ ಕಲಾವಿದರನ್ನು ಬಳಸುತ್ತಿದ್ದಾರಂತೆ.
ಕುಮಾರ್ ಗೋವಿಂದ್ ಬಹುಮುಖಿ ಪ್ರತಿಭಾವಂತ. ಸಿನಿಮಾವೊಂದರ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. 'ಮಾಸ್ಟರ್ ಮೈಂಡ್‌' ಎನ್ನುವ ಶೀರ್ಷಿಕೆ ನೋಡಿದಾಗಲೇ ಗೊತ್ತಾಗುತ್ತದೆ ಇದು ವಿಭಿನ್ನ ಸಿನಿಮಾ ಎಂಬುದು. ಈ ಚಿತ್ರದ ಮೂಲಕ ಗೋವಿಂದ್ ಮತ್ತಷ್ಟು ಯಶಸ್ಸು ಸಿಗಲಿ ಎಂದರು ನಟ ಉಪೇಂದ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.