ದೂದ್ಸಾಗರ್ನಲ್ಲಿ ರಮ್ಯಾ

ಚಾಮುಂಡೇಶ್ವರಿ ಸ್ಟುಡಿಯೋದ ಸಡಗೋಪನ್ 1969ರ ಬಳಿಕ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಅದು ಆಕಾಶದಿಂದ ಧರೆಗೆ ಇಳಿದಂತೆ ಕಾಣುವ 'ದೂದ್ಸಾಗರ್' ಎಂಬ ಜಲಪಾತದ ಹೆಸರಿಟ್ಟುಕೊಂಡು.
ಸದ್ಯಕ್ಕೆ ಬಹುತೇಕ ಚಿತ್ರೀಕರಣ ಮುಗಿಸಿರುವ ಈ 'ದೂದ್ಸಾಗರ್' ಚಿತ್ರಕ್ಕೆ ಮೊನ್ನೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲೇ ಐಟಂ ಸಾಂಗ್ ಒಂದರ ಚಿತ್ರೀಕರಣ ನಡೆಯಿತು. ಅಲ್ಲಿ ಐಟಂ ಗರ್ಲ್ ಆಗಿ ಕಾಣಿಸಿಕೊಂಡಿದ್ದು ರಮ್ಯಾ ಬಾರ್ನಾ.
ಅಕ್ಷಯ್ ದೀಪಿಕಾ ದಾಸ್ ದೂದ್ಸಾಗರ್ ಚಿತ್ರದ ನಾಯಕ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಆದರೆ ಆ ದಿನ ಮಾತ್ರ ರಮ್ಯಾ ಬಾರ್ನಾ ಅವರಿಗೆ ಮೀಸಲಾಗಿತ್ತು. ರಾಧೆ, ರಾಧೆ ಎಂದು ಆರಂಭವಾಗುವ ಈ ಹಾಡಿಗೆ ರಮ್ಯಾ ಅಂದು ಹೆಜ್ಜೆ ಹಾಕುತ್ತಿದ್ದರು. ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದುದು ರಮ್ಯಾ ಆದರೂ ನಾಯಕ ಅಕ್ಷಯ್ ಮತ್ತು ನಾಯಕಿ ದೀಪಿಕಾ ದಾಸ್ ಅವರಿಗೂ ಅಲ್ಲಿ ಜಾಗವಿತ್ತು. ಈ ಹಾಡಿಗೆ ರಾಗ ಹಾಕಿರುವ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ. ಚಂದ್ರ ಚಿತ್ರದಿಂದ ಈಗಾಗಲೇ ಸಂಗೀತ ನಿರ್ದೇಶಕರಾಗಿ ಗಮನಸೆಳೆದಿರುವ ಗೌತಮ್ ಅವರ ರಾಗಗಳ ಹೊಸ ವರಸೆ ಇದು. ಇದನ್ನು ನೀವು ಐಟಂ ಸಾಂಗ್ ಎನ್ನಿ, ಸ್ಪೆಷಲ್ ಸಾಂಗ್ ಎನ್ನಿ ಪರವಾಗಿಲ್ಲ. ಆದರೆ ನನ್ನ ಮಟ್ಟಿಗೆ ಇದು ಚಿತ್ರದಲ್ಲಿ ಸಾಂದರ್ಭಿಕವಾಗಿ ಬರುವ ಗೀತೆ. ಈ ಹಾಡಿನಲ್ಲಿ ಅಭಿನಯಿಸಲು ನನಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ರಮ್ಯಾ ಬಾರ್ನಾ.
ತಮ್ಮ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಯಾಮುಯೆಲ್ ಟೋನಿ ಈ ಚಿತ್ರದ ಕಥೆಯ ಬಗ್ಗೆ ಸಾಕಷ್ಟು ಬಾರಿ ಹೋಮ್ವರ್ಕ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಪ್ರೀತಿಯನ್ನು ಹಾಲಿಗೆ ಹೋಲಿಸಿದ್ದೇನೆ ಎನ್ನುವ ಟೋನಿ ರಾಮನಗರ, ಚಿಕ್ಕಮಗಳೂರು, ಸಕಲೇಶಪುರದಲ್ಲಿ ದೂದ್ಸಾಗರ್ನ ಚಿತ್ರೀಕರಣ ಮುಗಿಸಿದ್ದಾರೆ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


