ಅಮೀರ್ ನಟನೆಗೆ 'ಜೈ' ಅಂದ ಸಚಿನ್

ಬಾಲಿವುಡ್ ನಟ ಅಮೀರ್ ಖಾನ್‌ರ ಪಿಕೆ ಚಿತ್ರವನ್ನು ವೀಕ್ಷಿಸಿದ ಕ್ರಿಕೆಟ್...
ಅಮೀರ್ ಖಾನ್‌, ಸಚಿನ್ ತೆಂಡೂಲ್ಕರ್
ಅಮೀರ್ ಖಾನ್‌, ಸಚಿನ್ ತೆಂಡೂಲ್ಕರ್
Updated on

ಬಾಲಿವುಡ್ ನಟ ಅಮೀರ್ ಖಾನ್‌ರ ಪಿಕೆ ಚಿತ್ರವನ್ನು ವೀಕ್ಷಿಸಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಅಮೀರ್ ಅಭಿನಯಕ್ಕೆ ಜೈ ಅಂದಿದ್ದಾರೆ. ಅಲ್ಲದೆ ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು ಎಂದು ಹೇಳಿದ್ದಾರೆ.

ಪಿಕೆ ಚಿತ್ರತಂಡ ಸೆಲೆಬ್ರಿಟಿಗಳಿಗಾಗೇ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಈ ವಿಶೇಷ ಪ್ರದರ್ಶನದಲ್ಲಿ ಸಚಿನ್ ತೆಂಡೂಲ್ಕರ್ ಸಹ ಭಾಗಿಯಾಗಿದ್ದರು. ಪತ್ನಿ ಅಂಜಲಿಯೊಂದಿಗೆ ಚಿತ್ರ ನೋಡಿ ಹೊರಬಂದ ಸಚಿನ್ ತುಂಬಾನೇ ಖುಷಿಯಾಗಿದ್ದರು. ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿನ್ ಸಿನಿಮಾ ಸೂಪರ್. ಎಲ್ಲರೂ ನೋಡಲೇಬೇಕಾದ ಸಿನಿಮಾ ಎಂದರು.

ಚಿತ್ರ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಅಮೀರ್ ಯಾವಾಗ್ಲೂ ವಿಭಿನ್ನ ರೀತಿಯ ಚಿತ್ರಗಳನ್ನು ಮಾಡ್ತಾರೆ. ಅದಕ್ಕೆ ತಾಜಾ ಉದಾಹರಣೆ ಪಿಕೆ. ಈ ಚಿತ್ರದಲ್ಲಿ ಅಮೀರ್ ನಟನೆ ಅಮೋಘ. ನಾನೆಂದಿಗೂ ನೋಡಿದರ ಚಿತ್ರ ಎಂದರು.

ಬಾಲಿವುಡ್ ನಟ ಅಮೀರ್ ಖಾನ್‌ರ ಬಹು ನಿರೀಕ್ಷಿತ ಪಿಕೆ ಚಿತ್ರ ಇಂದು ದೇಶಾದ್ಯಾಂತ ಬಿಡುಗಡೆಗೊಂಡಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com