

ಇಟಲಿ: ಸ್ಯಾಂಡಲ್ ವುಡ್ ನ ನಿರ್ದೇಶಕ ಹರ್ಷ ಇಟಲಿಯ ಮಿಲಾನ್ ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಜ್ರಕಾಯ ಚಿತ್ರದ ನಿರ್ದೇಶಕ ಹರ್ಷ ಮಿಲಾನ್ ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡಿದ್ದು, ಪಾಸ್ ಪೋರ್ಟ್ ಗಾಗಿ ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೊರೆ ಹೋಗಿದ್ದಾರೆ.
ಇಟಲಿಯ ಮಿಲಾನ್ ನಲ್ಲಿ ನಟ ಶಿವರಾಜಕುಮಾರ್ ಅರೊಂದಿಗೆ ವಜ್ರಕಾಯ ಚಿತ್ರದ ಹಾಡುಗಳ ಚಿತ್ರೀಕರಣ ನಡೆಸುತ್ತಿದ್ದ ಹರ್ಷ ಶೂಟಿಂಗ್ ನಡುವೆ ತಿಂಡಿ ತಿನ್ನಲೆಂದು ರೆಸ್ಟೋರೆಂಟ್ ಗೆ ಹೋಗಿದ್ದಾಗ ಅವರ ಪಾಸ್ ಪೋರ್ಟ್ ಇದ್ದ ಬ್ಯಾಗ್ ಕಳುವಾಗಿದೆ. ಬ್ಯಾಗ್ ನಲ್ಲಿ ಪಾಸ್ ಪೋರ್ಟ್ ಸೇರಿದಂತೆ ಮುಖ್ಯವಸ್ತುಗಳು ಇದ್ದವು ಎಂದು ಹೇಳಲಾಗಿದೆ.
ಭಾರತಕ್ಕೆ ಹಿಂದಿರುಗಲು ಪಾಸ್ ಪೋರ್ಟ್ ಅತ್ಯವಶ್ಯಕವಾಗಿ ಬೇಕಾಗಿದೆ. ಈ ಹಿನ್ನಲೆಯಲ್ಲಿ ಹರ್ಷ ಪಾಸ್ ಪೋರ್ಟ್ ಪಡೆಯಲು ಭಾರತೀಯ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ. ಒಂದೊಮ್ಮೆ ಪಾಸ್ರ್ ಪೋರ್ಟ್ ಸಿಗದಿದ್ದರೆ ಹರ್ಷ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.