ಸಮಂತಾಗೆ ಲಕ್ಷ ಅಂದ್ರೆ ಅಲಕ್ಷ್ಯ!

ಎರಡು ಸ್ಟೆಪ್ ಹಾಕಿದ್ರೆ ಎಂಬತ್ತು ಲಕ್ಷ ಕೊಡ್ತೀನಿ ಅಂದ್ರೂ ಒಲ್ಲೆ ಅಂದ ಬೆಡಗಿ ಸಮಂತಾ ಹೊಸ ವರ್ಷದಲ್ಲಿ...
ಸಮಂತಾ
ಸಮಂತಾ
Updated on: 

ಎರಡು ಸ್ಟೆಪ್ ಹಾಕಿದ್ರೆ ಎಂಬತ್ತು ಲಕ್ಷ ಕೊಡ್ತೀನಿ ಅಂದ್ರೂ ಒಲ್ಲೆ ಅಂದ ಬೆಡಗಿ ಸಮಂತಾ ಹೊಸ ವರ್ಷದಲ್ಲಿ ತನ್ನ ಇಮೇಜಿನ ಬಗ್ಗೆ ಭಾರೀ ಕಾಳಜಿ ವಹಿಸಿದ್ದಾಳೆ.

ಮೂರು ವರ್ಷಗಳಿಂದ ಟಾಲಿವುಡ್ಡಿನಲ್ಲಿ ವರ್ಷದ ತಾರಿ ಪಟ್ಟ ಉಳಿಸಿಕೊಂಡು ಬಂದಿದ್ದ ಸಮಂತಾ ಕಳೆದ ವರ್ಷ ಮಾತ್ರ ಸತತ ಫ್ಲಾಪ್‌ಗಳಿಂದ ಕುಸಿದು ಹೋಗಿದ್ದಳು. ಈಗ, ದೂಕುಡು, ಮನಂ ಮುಂತಾದ ಚಿತ್ರಗಳ ಯಶಸ್ಸಿನಿಂದ ಕೊಂಚ ಮೈಮರೆತದ್ದೇ ಇದಕ್ಕೆ ಕಾರಣ ಎಂದ ಆತ್ಮವಿಮರ್ಶ ಮಾಡಿಕೊಂಡಿರು ಸಮಂತಾ ಇನ್ಮುಂದೆ ನಿರಾಶೆ ಗೊಳಿಸುವುದಿಲ್ಲವೆಂದು ತನ್ನ ಫ್ಯಾನ್‌ಗಳಿಗೆ ಈಗಾಗಲೇ ಟ್ವೀಟ್ ಮೂಲಕ ಮಾತು ಕೊಟ್ಟಿದ್ದಾಳೆ.

ತೆರೆಯ ಮೇಲೂ ಹಾಗೂ ತೆರೆಯಾಚೆಗೂ ಫ್ಯಾನ್‌ಗಳ ಕಣ್ಣಲ್ಲಿ ಇಮೇಜ್ ಶುದ್ಧವಾಗಿಟ್ಟುಕೊಳ್ಳಲು ಎಚ್ಚರ ವಹಿಸಿರುವ ಸಮಂತಾ, ಹೊಸವರ್ಷದ ಪ್ರಯುಕ್ತ ಯಾವುದೋ ಒಂದು ಡ್ಯಾನ್ಸ್ ಶೋಗೆ ಒಪ್ಪಿಗೆ ಕೊಟ್ಟವಳು ಕೊನೆಗಳಿಗೆಯಲ್ಲಿ ಹಿಂದೆ ಸರಿದಿದ್ದಾಳೆ.

ಒಂದುಕೋಟಿಯ ತನಕ ಆಫರ್ ವಿಸ್ತಾರವಾದರೂ, ಸುತರಾಂ ಒಪ್ಪದ ಸಮಂತಾ, ಗೆಳತಿಯರ ಜೊತೆ ಗೋವಾ ಹೋಗಿ ಹೊಸವರ್ಷ ಆಚರಿಸಿ ಬಂದಿದ್ದಾಳೆ. ಇಮೇಜು ಉಳಿಸಿಕೊಂಡರೆ ಇಂಥ ಹಲವು ಕೋಟಿ ಸಂಪಾದಿಬಲ್ಲೆ ಎಂದಿರುವ ಸಮಂತಾ ಹೀರೋಯಿನ್‌ಗಳಿಗೂ ಮೆದುಳಿರೋದನ್ನು ಪ್ರೂವ್ ಮಾಡಿದ್ದಾಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com