"ಡಿಕೆ''ಗೆ ಜಗ್ಗೇಶ್ ವಾಯ್ಸ್

ಜೋಗಿ ಪ್ರೇಮ್ ನಾಯಕರಾಗಿರುವ ಅವರದೇ ನಿರ್ಮಾಣದ 'ಡಿಕೆ' ಚಿತ್ರ ಬಿಡುಗಡೆ ದಿನ...
'ಡಿಕೆ'ಗಾಗಿ ಧ್ವನಿ ನೀಡುತ್ತಿರುವ ನಟ ಜಗ್ಗೇಶ್ (ಸಂಗ್ರಹ ಚಿತ್ರ)
'ಡಿಕೆ'ಗಾಗಿ ಧ್ವನಿ ನೀಡುತ್ತಿರುವ ನಟ ಜಗ್ಗೇಶ್ (ಸಂಗ್ರಹ ಚಿತ್ರ)
Updated on

ಜೋಗಿ ಪ್ರೇಮ್ ನಾಯಕರಾಗಿರುವ ಅವರದೇ ನಿರ್ಮಾಣದ 'ಡಿಕೆ' ಚಿತ್ರ ಬಿಡುಗಡೆ ದಿನ ಹತ್ತಿರವಾಗುತ್ತಿರುವ ದಿನಕ್ಕೊಂದು ಸುದ್ದಿಯೊಂದಿಗೆ ಪ್ರಚಾರದಲ್ಲಿದೆ.

ಐಟಂ ಸಾಂಗ್‌ಗೆ ಸನ್ನಿ ಲಿಯೋನ್ ಬಂದು ಹೆಜ್ಜೆ ಹಾಕಿದ್ದು, ಶೋಭರಾಜ್ ಶೋ ಕೊಟ್ಟದ್ದು, ಡಿಕೆ ಶಿವಕುಮಾರ್ ಸಿನಿಮಾ ನೋಡಿ ಗ್ರೀನ್ ಸಿಗ್ನಲ್ ಕೊಟ್ಟದ್ದು... ಹೀಗೆ ಹಲವು ಸುದ್ದಿಗಳ ನಡುವೆ ಒಂದು ಆಹ್ಲಾದಕರರ ಸುದ್ದಿ ಫೋಟೋಗಳ ಸಮೇತ ಹೊರಬಿದ್ದಿದೆ. ವಿಷಯ ಏನಂದ್ರೆ.. ಡಿಕೆ ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದಾರೆ. ಜಗ್ಗೇಶ್ ಈ ಹಿಂದೆ ಶರಣ್ ನಾಯಕರಾಗಿದ್ದ ಚಿತ್ರಕ್ಕೆ ತಮ್ಮ ದನಿಯಲ್ಲಿ ನಿರೂಪಣೆ ಮಾಡಿ ಅನುಭವ ಪಡೆದಿರುವ ಜಗ್ಗೇಶ್ ವಾಯ್ಸ್‌ಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಪ್ರೇಮ್ ಮತ್ತು ನಿರ್ದೇಶಕ ವಿಜಯ್ ಹಂಪಾಳಿ ಡಿಕೆ ಚಿತ್ರದ ನಿರೂಪಣೆಗಾಗಿ ಜಗ್ಗೇಶ್ ದನಿಯನ್ನು ಬಳಸಿದ್ದಾರೆ. ಜಗ್ಗೇಶ್ ದನಿಯಲ್ಲೇ ಅವರ ಮ್ಯಾನರಿಸಂಗಳೂ ಕಣ್ಮುಂದೆ ಬರುತ್ತವೆ. ಅವರಿಗಾಗಿಯೇ ಪಂಚಿಂಗ್ ಚಿನಕುರುಳಿ ಡೈಲಾಗುಗಳನ್ನು ನಿರೂಪಣೆಗಾಗಿ ಬರೆಯಲಾಗಿದೆಯಂತೆ. ಅಷ್ಟೇ ಅಲ್ಲ ಚಿತ್ರದ ಆರಂಭ ಮತ್ತು ಕೊನೆಯ ಭಾಗದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳಲ್ಲಿದ್ದಾರೆ. ಆದರೆ ಹೊಸ ರೂಪದಲ್ಲಿ! ಇದೇ ಮೊದಲ ಬಾರಿಗೆ ಜಗ್ಗೇಶ್‌ರನ್ನು ಗ್ರಾಫಿಕ್ಸ್ ಮೂಲಕ ಕಾರ್ಟೂನ್ ರೂಪದಲ್ಲಿ ತೋರಿಸಲಾಗುತ್ತದಂತೆ. ಡಿಕೆ ಚಿತ್ರದ ಪಾತ್ರಗಳ ಪರಿಚಯ ಜಗ್ಗೇಶ್ ಧ್ವನಿ ಮತ್ತು ಈ ಕಾರ್ಟೂನ್ ಮೂಲಕ ಆಗಲಿದೆಯಂತೆ ಹಾಗಾಗಿ ಚಿತ್ರಕ್ಕೆ ಒಂದು ಎನರ್ಜೆಟಿಕ್ ಆರಂಭ ಸಿಗುವುದಂತೂ ಖಂಡಿತ ಎಂಬ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com