ಐತೇರಿ ಲಕಡಿ ಪಕಡಿ ಜುಮ್ಮ... ತಾತನಾದ ಸಂಭ್ರಮದಲ್ಲಿ ಜಗ್ಗೇಶ್

ಹಿರಿಯ ನಟ ಮತ್ತು ರಾಜಕಾರಿಣಿ ಜಗ್ಗೇಶ್ ಈಗ ತಾತ. ಅವರ ಮಗ ಗುರುರಾಜ್ ಗಂಡು ಮಗುವಿಗೆ ತಂದೆಯಾಗಿದ್ದು ಈ ಸಂಭ್ರಮದಲ್ಲಿ
ಹಿರಿಯ ಹಾಸ್ಯ ನಟ ಮತ್ತು ರಾಜಕಾರಿಣಿ ಜಗ್ಗೇಶ್
ಹಿರಿಯ ಹಾಸ್ಯ ನಟ ಮತ್ತು ರಾಜಕಾರಿಣಿ ಜಗ್ಗೇಶ್

ಬೆಂಗಳೂರು: ಹಿರಿಯ ಹಾಸ್ಯ ನಟ ಮತ್ತು ರಾಜಕಾರಿಣಿ ಜಗ್ಗೇಶ್ ಈಗ ತಾತ. ಅವರ ಮಗ ಗುರುರಾಜ್ ಗಂಡು ಮಗುವಿಗೆ ತಂದೆಯಾಗಿದ್ದು ಈ ಸಂಭ್ರಮದಲ್ಲಿ "ನಾನು ತಾತನ ಹಾಗೆ ಕಾಣುತ್ತೇನೆಯೆ? ಗೆಳೆಯರೆ ನಾನು ತಾತನಾಗಿದ್ದೇನೆ. ರಾಯರ ದಯೆಯಿಂದ ನನ್ನ ಮಗ ಗಂಡು ಮಗುವಿನ ತಂದೆಯಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಅಪ್ಪನಾಗುವುದೇ ಒಂದು ವಿಭಿನ್ನ ಖುಷಿ ತಾತನಾಗುವುದಕ್ಕೆ ಇನ್ನೂ ಹೆಚ್ಚು ಖುಷಿ ಎಂದಿದ್ದಾರೆ ಜಗ್ಗೇಶ್. "ಪತ್ರಿ ಮನುಷ್ಯ ತಂದೆಯಾದ ಮೇಲೆ ಹೊಸ ಪೀಳೆಗೆಯೊಂದನ್ನು ಹುಟ್ಟು ಹಾಕುತ್ತಾನೆ ಮತ್ತು ಹೆಚ್ಚು ಜವಾಬ್ದಾರಿಯುತನಾಗುತ್ತಾನೆ. ಇಂದು ನಮ್ಮ ಮಗ ಗುರುರಾಜ್ ತಂದೆಯಾಗಿದ್ದಾನೆ. ಹಾಗೆಯೇ ನಮ್ಮ ಪೀಳೆಗೆಯನ್ನು ಮುಂದುವರೆಸಲಿದ್ದಾನೆ. ನನ್ನ ಮೊಮ್ಮಗ ಹುಟ್ಟಿದಾಕ್ಷಣ ನನ್ನ ತಾತನನ್ನು ನೆನಪಿಸಿಕೊಂಡೆ ಮತ್ತು ವಿಶ್ವದ ಇತರ ತಾತಂದಿರನ್ನೂ  ನೆನಪಿಸಿಕೊಂಡೆ" ಎನ್ನುತ್ತಾರೆ ಜಗ್ಗೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com