ಕಿಚ್ಚ ಸುದೀಪ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಹುಲ್ ನಾಯಕ

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರದಲ್ಲಿ ರಾಹುಲ್ ನಾಯಕನಾಗಿ ನಟಿಸಲಿದ್ದಾರೆ
ಸುದೀಪ್
ಸುದೀಪ್

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರದಲ್ಲಿ ರಾಹುಲ್ ನಾಯಕನಾಗಿ ನಟಿಸಲಿದ್ದಾರೆ.
ರಾಹುಲ್ ಸೆಲೆಬ್ರಿಟಿ ಕ್ರಿಕೆಟ್ ಟೀಮ್ ನ ಸದಸ್ಯರಾಗಿದ್ದಾರೆ. ಇದುವರೆಗೂ ಸುದೀಪ್ ತಮ್ಮ ಹೋಮ್ ಬ್ಯಾನರ್ ನಲ್ಲಿ ತಾವೇ ನಾಯಕರಾಗಿ ನಟಿಸುತ್ತಿದ್ದರು. ಇದೇ ಮೊದಲ ಬಾರಿಗೆ ಹೊಸ ನಟನನ್ನು ಹಾಕಿಕೊಂಡು ಚಿತ್ರ ನಿರ್ಮಿಸಲು ಮುಂದಾಗಿದ್ದು, ಈ ವಾರದಲ್ಲೇ ಚಿತ್ರ ಸೆಟ್ಟೇರಲಿದೆ.

ಸುದೀಪ್ ಹೋಂ ಬ್ಯಾನರ್ ನಲ್ಲಿ ನಟಿಸುತ್ತಿರುವುದಕ್ಕೆ ನಾಯಕ ರಾಹುಲ್ ಹರ್ಷ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರ ಮಾರ್ಗದರ್ಶನದಲ್ಲಿ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ ಎಂದರು. ನಿರ್ದೇಶಕ ಶಿವನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಕಳ್ಳನ ಕಥೆ ಇರುವ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ. ಆದರೆ ಚಿತ್ರದಲ್ಲಿ ಸುದೀಪ್ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಲಿದ್ದಾರೆ. ಅದು ಏನು ಅಂತಾ ಕಾದು ನೋಡಿ ಎಂದು ರಾಹುಲ್ ಹೇಳಿದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com