'ಪಿಕು' ಗೆಲುವು ಪ್ರೇಕ್ಷಕರ ಗೆಲುವು: ಇರ್ಫಾನ್ ಖಾನ್

ಶೂಜಿತ್ ಸರ್ಕಾರ್ ಅವರ 'ಪಿಕು' ಸಿನೆಮಾ ಪ್ರೇಕ್ಷಕರಿಂದ ಹಾಗು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದೆ.
ಪಿಕು ಚಲನಚಿತ್ರ ಪ್ರಚಾರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್
ಪಿಕು ಚಲನಚಿತ್ರ ಪ್ರಚಾರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್
Updated on

ಮುಂಬೈ: ಶೂಜಿತ್ ಸರ್ಕಾರ್ ಅವರ 'ಪಿಕು' ಸಿನೆಮಾ ಪ್ರೇಕ್ಷಕರಿಂದ ಹಾಗು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದೆ. ಈ ಅಭೂತಪೂರ್ವ ಪ್ರತಿಕ್ರಿಯೆ ಪ್ರೇಕ್ಷಕರ ಹಾಗೂ ಸಿನೆಮಾ ನಿರ್ದೇಶಕರ ಗೆಲುವು. ವಿಭಿನ್ನವಾಗಿ ಪ್ರೇಕ್ಷಕರನ್ನು ತೊಡಗಿಸಿಕೊಂಡು ಮನರಂಜನೆ ನೀಡುವ ಕಲೆ ನಿರ್ದೇಶಕರಿಗೆ ತಿಳಿದಿದೆ ಎಂದಿದ್ದಾರೆ ನಟ ಇರ್ಫಾನ್ ಖಾನ್.

"ಪಿಕು ಸಿನೆಮಾ ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಧನ್ಯಭಾವ, ಭರವಸೆ ಮೂಡುತ್ತಿದೆ ಬೆಳಕು ಆವರಿಸುತ್ತಿದೆ. ಇದು ಪ್ರೇಕ್ಷಕರ ಹಾಗು ಪ್ರೇಕ್ಷಕರನ್ನು ವಿಭಿನ್ನವಾಗಿ ತೊಡಗಿಸಿಕೊಳ್ಳುವ ಹೊಸ ಹೊಸ ನಿರ್ದೇಶಕರ ಗೆಲುವು" ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

ತಂದೆ ಮಗಳ ಮೈತ್ರಿಯ ಕಥೆಯುಳ್ಳ ಸಿನೆಮಾದಲ್ಲಿ ತಂದೆ ಮಗಳಾಗಿ ಕ್ರಮವಾಗಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇರ್ಫಾನ್ ಖಾನ್ ಕೂಡ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಭಾವನಾತ್ಮಕ ಹಾಗು ಹಾಸ್ಯಮಯ ಸಿನೆಮಾ ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com