ನಟಿ ಪೂಜಾ ಹೆಗಡೆ ಜೊತೆ ಹೃತಿಕ್ ರೋಷನ್ ಕುಚ್ ಕುಚ್ ?

ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗಡೆ ಜೊತೆ ಲವ್ ಶುರುವಾಗಿದೆಯಂತೆ. ...
ಹೃತಿಕ್ ರೋಶನ್ ಮತ್ತು ಪೂಜಾ ಹೆಗ್ಡೆ
ಹೃತಿಕ್ ರೋಶನ್ ಮತ್ತು ಪೂಜಾ ಹೆಗ್ಡೆ

ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗಡೆ ಜೊತೆ ಲವ್ ಶುರುವಾಗಿದೆಯಂತೆ. ಹೀಗಂತ ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಆರಂಭವಾಗಿದೆ

ಬಾಲ್ಯದ ಗೆಳತಿ ಪತ್ನಿ ಸೂಸಾನ್ ಗೆ ವಿಚ್ಛೇಧನ ನೀಡಿದ ನಂತರ ಒಂಟಿಯಾಗಿರುವ ಹೃತಿಕ್ ಗೆ ಪೂಜಾ ಹೆಗಡೆ ಸಾಥ್ ನೀಡಿದ್ದಾರಂತೆ. ಅಶುತೋಷ್ ಗೋವರಿಕರ್ ನಿರ್ದೇಶನ ಹಾಗೂ ನಿರ್ಮಾಣದ ಮೆಹೆಂಜೊದಾರೋ ಚಿತ್ರದಲ್ಲಿ ಈ ಇಬ್ಬರು ಒಟ್ಟೊಟ್ಟಿಗೆ ಹಾಟ್ ಆಗಿ ಕಾವಣಿಸಿಕೊಂಡಿರುವುದು ಎಲ್ಲರಲ್ಲೂ ಕೂತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸಖತ್ ಮ್ಯಾಚ್ ಆಗಿದೆಯಂತೆ. ಹಾಗೆ ನಿಜ ಜೀವನದಲ್ಲೂ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎಂಬುದು ಬಾಲಿವುಡ್ ಮಂದಿಯ ಗುಸುಗುಸು. ಆದರೆ ಇದು ಕೇವಲ ಚಿತ್ರಕ್ಕೆ ಮಾತ್ರ ಎಂದು ಸಮರ್ಥಿಸಿಕೊಂಡಿದ್ದಾರೆ. ಆದೆರ ಬೆಂಕಿಯಿಲ್ಲದೇ ಹೊಗೆಯಾಡಲ್ಲ ಎಂಬುದು ಎಲ್ಲರ ಅಭಿಪ್ರಾಯ.

ಖ್ಯಾತ ನಟ ಆಮೀರ್ ಖಾನ್ ಕೂಡ ಸಹ ನಿರ್ದೇಶಕಿ ಜೊತೆ ಕಿರಣ್ ರಾವ್ ಜೊತೆ ಪ್ರೀತಿ ಉಂಟಾಗಿತ್ತು. ನಂತರ ಆಮೀರ್ ಪತ್ನಿ ರಿನಾಗೆ ವಿಚ್ಚೇಧನ ನೀಡಿ ಕರ್ನಾಟಕ ಮೂಲದ ಕಿರಣ್ ರಾವ್ ಜೊತೆ ವಿವಾಹ ಮಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com