ಹುಚ್ಚಾ ವೆಂಕಟ್ ತಮ್ಮ ರಫ್ ಅಂಡ್ ಟಫ್ ಮ್ಯಾನರಿಸಂ ಮೂಲಕ ಬಿಗ್ ಬಾಸ್ ಮನೆಗೆ ಕಿಚ್ಚು ಹಚ್ಚಿದ್ದರು. ಹೀಗೆ ತಮ್ಮ ಸ್ವಾಭಾವವನ್ನು ಬಿಡದ ಹುಚ್ಚಾ ವೆಂಕಟ್ ಸ್ಫರ್ಧಾಳುಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು, ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಟ್ ನನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.