'ಬೇವಾಚ್' ತಾರಾಗಣದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆಗೆ ಪಮೇಲಾ ಆಂಡೆರ್ಸನ್

ಹಾಲಿವುಡ್ ನಟಿ-ರೂಪದರ್ಶಿ ಪಮೇಲಾ ಆಂಡೆರ್ಸನ್ ಅವರು ಬಹು ತಾರಾಗಣದ 'ಬೇವಾಚ್' ಸಿನೆಮಾದ ಪಾತ್ರವಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ.
ಹಾಲಿವುಡ್ ನಟಿ-ರೂಪದರ್ಶಿ ಪಮೇಲಾ ಆಂಡೆರ್ಸನ್
ಹಾಲಿವುಡ್ ನಟಿ-ರೂಪದರ್ಶಿ ಪಮೇಲಾ ಆಂಡೆರ್ಸನ್
Updated on

ಲಾಸೇಂಜಲಿಸ್: ಹಾಲಿವುಡ್ ನಟಿ-ರೂಪದರ್ಶಿ ಪಮೇಲಾ ಆಂಡೆರ್ಸನ್ ಅವರು ಬಹು ತಾರಾಗಣದ 'ಬೇವಾಚ್' ಸಿನೆಮಾದ ಪಾತ್ರವಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ.

ಇಸ್ಟಾಗ್ರಾಂ ಪೋಸ್ಟ್ ಮೂಲಕ ೪೮ ವರ್ಷದ ಈ ನಟಿ ಸಿನೆಮಾದ ಭಾಗವಾಗುತ್ತಿರುವುದನ್ನು ನಟ ದ್ವೇಯ್ನ್ 'ದ ರಾಕ್' ಜಾನ್ಸನ್ ಘೋಷಿಸಿದ್ದಾರೆ.

"ನಮ್ಮ ಬೇವಾಚ್ ತಾರಾಗಣಕ್ಕೆ ಎಂದಿಗೂ ಸುಂದರವಾದ ಪಮೇಲಾ ಆಂಡೆರ್ಸನ್ ಅವರಿಗೆ ಸುಸ್ವಾಗತ. ನಿಮ್ಮನ್ನು ಬಿಟ್ಟು ಈ ಸಿನೆಮಾ ಮಾಡಲು ಸಾಧ್ಯವಿರಲಿಲ್ಲ" ಎಂದು ನಟ ಬರೆದಿದ್ದಾರೆ.

ಸೇಥ್ ಗಾರ್ಡನ್ ನಿರ್ದೇಶನದ 'ಬೇವಾಚ್' ಸಿನೆಮಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ನಟಿಸುತ್ತಿದ್ದು, ಈ ಸಿನೆಮಾ ಅಮೆರಿಕಾದಲ್ಲಿ ಮೇ ೧೯ ೨೦೧೭ಕ್ಕೆ ಬಿಡುಗಡೆಯಾಗಬೇಕಿದೆ. ಅಮೆರಿಕಾ ಧಾರವಾಹಿ 'ಕ್ವಾಂಟಿಕೋ' ಮೂಲಕ ಜಾಗತಿಕವಾಗಿ ಜನಪ್ರಿಯವಾಗಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಇದು ಮೊದಲ ಹಾಲಿವುಡ್ ಸಿನೆಮಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com