ಗಣೇಶ್ ಗೆ ನೆನಪಿನ ಬುತ್ತಿ ಕಟ್ಟಿಕೊಟ್ಟ ಮುಂಗಾರುಮಳೆ-2

ಶಶಾಂಕ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಮುಂಗಾರು ಮಳೆ-2 ಚಿತ್ರ ನಟ ಗಣೇಶ್ ಗೆ ಅಪಾರ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆಯಂತೆ.
ಗಣೇಶ್ ಗೆ ನೆನಪಿನ ಬುತ್ತಿ ಕಟ್ಟಿಕೊಟ್ಟ ಮುಂಗಾರುಮಳೆ-2
ಗಣೇಶ್ ಗೆ ನೆನಪಿನ ಬುತ್ತಿ ಕಟ್ಟಿಕೊಟ್ಟ ಮುಂಗಾರುಮಳೆ-2
Updated on: 

ಬೆಂಗಳೂರು: ಶಶಾಂಕ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಮುಂಗಾರು ಮಳೆ-2 ಚಿತ್ರ ನಟ ಗಣೇಶ್ ಗೆ ಅಪಾರ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆಯಂತೆ.

ಮುಂಗಾರುಮಳೆ-2 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿವೆ. ಇನ್ನು ಚಿತ್ರದ ಟೀಸರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದು, ಮುಂಗಾರುಮಳೆ-2  ಚಿತ್ರ ಮುಂಗಾರುಮಳೆಯ ಮುಂದುವರೆದ ಭಾಗವೇ ಅಥವಾ ಮತ್ತೊಂದು ಬೇರೆ ಚಿತ್ರಕಥೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಚಿತ್ರದ ಚಿತ್ರೀಕರಣ ತಮಗೆ ತುಂಬಾ ಸಂತಸ ನೀಡಿದ್ದು, ಮರೆಯಲಾಗದ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ ಎಂದು ಚಿತ್ರದ ನಾಯಕ ನಟ ಗಣೇಶ್ ಹೇಳಿದ್ದಾರೆ. ಈ ಬಗ್ಗೆ ತಮ್ಮ  ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ಗಣೇಶ್, ಮುಂಗಾರು ಮಳೆ ಚಿತ್ರದಂತೆಯೇ ಮುಂಗಾರುಮಳೆ-2 ಚಿತ್ರದ ಚಿತ್ರೀಕರಣವನ್ನು ಕೂಡ ತಾವು ಮರೆಯುವುದಿಲ್ಲ. ಚಿತ್ರೀಕರಣದ  ವೇಳೆ ಸಾಕಷ್ಟು ಘಟನೆಗಳ ನಡೆದಿದ್ದು, ಅವುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಮುಂಗಾರು ಮಳೆ ಚಿತ್ರಕ್ಕಾಗಿ ನನಗೆ ಯಾವುದೇ ವೈಯುಕ್ತಿಕ ಕಾಸ್ಟ್ಯೂಮ್ ಡಿಸೈನರ್ ಗಳಿರಲಿಲ್ಲ. ಅಲ್ಲಿ ನಾವೇ ಒಂದಷ್ಟು ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಆದರೆ  ಮುಂಗಾರುಮಳೆ-2ಗಾಗಿ ರೋಶ್ನಿ ಎಂಬುವವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸರಿಯಾಗಿ ನೆನಪಿದೆ ಹಾಡಿನ ಚಿತ್ರೀಕರಣಕ್ಕಾಗಿ ನಾವು ಆಯ್ಕೆ ಮಾಡಿದ್ದ ಉಡುಗೆ ಚಿತ್ರೀಕರಣದ ಸಮಯಕ್ಕೆ  ಸರಿಯಾಗಿ ಬಾರದ ಕಾರಣ ನನ್ನ ವೈಯುಕ್ತಿಕ ಕಲೆಕ್ಷನ್ ನಿಂದ ತರಿಸಿಕೊಳ್ಳಲಾಗಿತ್ತು. ಆದರೆ ಈ ಹಾಡಿಗೆ ಮತ್ತು ಹಾಡಿನ ವಸ್ತ್ರ ವಿನ್ಯಾಸಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com