ರಾಜ್ಯಾದ್ಯಂತ ಸೆ.2ಕ್ಕೆ ನೀರ್ ದೋಸೆ ಬಿಡುಗಡೆ

ಟ್ರೈಲರ್ ಹಾಗೂ ಹಾಡುಗಳಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಜಗ್ಗೇಶ್ ಅಭಿನಯದ ನೀರ್ ದೋಸೆ ಚಿತ್ರ ಇದೇ ಸೆಪ್ಟೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ...
ನೀರ್ ದೋಸೆ
ನೀರ್ ದೋಸೆ

ಟ್ರೈಲರ್ ಹಾಗೂ ಹಾಡುಗಳಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಜಗ್ಗೇಶ್ ಅಭಿನಯದ ನೀರ್ ದೋಸೆ ಚಿತ್ರ ಇದೇ ಸೆಪ್ಟೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಯಾವುದೇ ಕತ್ತರಿ ಪ್ರಯೋಗ ಮಾಡದೆ ಸೆನ್ಸಾರ್ ಮಂಡಳಿ ನೀರ್ ದೋಸೆ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದ್ದು, ಪ್ರಮಾಣಪತ್ರ ಸಿಗುತ್ತಿದ್ದಂತೆ ಚಿತ್ರತಂಡ ಚಿತ್ರದ ಬಿಡುಗೆಡೆ ಮುಂದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಅಲ್ ಚಲ್ ಮೂಡಿಸಿವೆ. ಸ್ಕಂದ ಎಂಟರ್ ಪ್ರೈಸಸ್ ಚಿತ್ರ ನಿರ್ಮಾಣ ಮಾಡಿದ್ದು, ಜಗ್ಗೇಶ್, ಹರಿಪ್ರಿಯಾ ಪ್ರಧಾನ ಭೂಮಿಕೆಯಲ್ಲಿದ್ದಾರೆ, ಚಿತ್ರವನ್ನು ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಿಸಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸುಮಾರು 120 ಥಿಯೇಟರ್ ಗಳಲ್ಲಿ ಸಿನಿಮಾ ಏಕ ಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com