'ಮಮ್ಮಿ ಸೇವ್ ಮಿ' ರಿಮೇಕ್ ನಲ್ಲಿ ಜ್ಯೋತಿಕಾ ನಟನೆ?

ತಮಿಳು ಸಿನಿಮಾ ’ಮಗಳಿರ್ ಮಟ್ಟುಂ' ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಜ್ಯೋತಿಕಾ, ಕನ್ನಡದ ಮಮ್ಮಿ ಸೇವ್ ಮಿ ರಿಮೇಕ್ ನಲ್ಲೂ ನಟಿಸಲಿದ್ದಾರೆ.
ಜ್ಯೋತಿಕಾ
ಜ್ಯೋತಿಕಾ
ತಮಿಳು ಸಿನಿಮಾ ’ಮಗಳಿರ್ ಮಟ್ಟುಂ' ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಜ್ಯೋತಿಕಾ, ಕನ್ನಡದ ಮಮ್ಮಿ ಸೇವ್ ಮಿ ರಿಮೇಕ್ ನಲ್ಲೂ ನಟಿಸಲಿದ್ದಾರೆ. 
ವದಂತಿಗಳ ಪ್ರಕಾರ ಜ್ಯೋತಿಕಾ ಮಮ್ಮಿ ಸೇವ್ ಮಿ ರಿಮೇಕ್ ನಲ್ಲಿ ನಟಿಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡದಲ್ಲಿ ಪ್ರಿಯಾಂಕ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿರುವ ಮಮ್ಮಿ ಸೇವ್ ಮಿ ಚಿತ್ರವನ್ನು ಜ್ಯೋತಿಕಾ ಹಾಗೂ ಸೂರ್ಯಾ ಇಬ್ಬರೂ ವೀಕ್ಷಿಸಿದ್ದಾರೆ. ಇದೇ ವೇಳೆ ಚಿತ್ರದ ನಿರ್ದೇಶಕ ಲೋಹಿತ್ ಮಮ್ಮಿ ಸೇವ್ ಮಿ ಚಿತ್ರವನ್ನು ರಿಮೇಕ್ ಮಾಡಲು ನಿರ್ಧರಿಸಿದ್ದು ಜ್ಯೋತಿಕಾ ಅವರನ್ನು ಪ್ರಧಾನ ಪಾತ್ರದಲ್ಲಿ ನಿರ್ದೇಶಿಸಲು ಉತ್ಸಾಹ ತೋರಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಧ್ಯದಲ್ಲೇ ಜ್ಯೋತಿಕಾ ಮಮ್ಮಿ ಸೇವ್ ಮಿ ರಿಮೇಕ್ ಚಿತ್ರದಲ್ಲಿ ನಟಿಸುವ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com