೧೮ ವರ್ಷಗಳ ನಂತರ ಸಿನೆಮಾ ಹಾಡು ಹಾಡಲು ಮೈಕ್ ಹಿಡಿದ ಅಮೀರ್ ಖಾನ್

೧೯೯೮ರ 'ಗುಲಾಮ್' ಸಿನೆಮಾದ ಜನಪ್ರಿಯ ಹಾಡು 'ಆತಿ ಕ್ಯಾ ಖಂಡಾಲಾ' ಹಾಡಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಅಮೀರ್ ಖಾನ್ ಈಗ ೧೮ ವರ್ಷಗಳ ನಂತರ ಮತ್ತೆ ಹಾಡಿದ್ದಾರೆ.
ಅಮೀರ್ ಖಾನ್
ಅಮೀರ್ ಖಾನ್
Updated on
ಮುಂಬೈ: ೧೯೯೮ರ 'ಗುಲಾಮ್' ಸಿನೆಮಾದ ಜನಪ್ರಿಯ ಹಾಡು 'ಆತಿ ಕ್ಯಾ ಖಂಡಾಲಾ' ಹಾಡಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಅಮೀರ್ ಖಾನ್ ಈಗ ೧೮ ವರ್ಷಗಳ ನಂತರ ಮತ್ತೆ ಹಾಡಿದ್ದಾರೆ. ಅವರ ಮುಂಬರಲಿರುವ 'ದಂಗಾಲ್' ಸಿನೆಮಾದಲ್ಲಿ 'ಢಾಕಾಡ್' ಹಾಡಿನ ಒಂದು ಆವೃತ್ತಿಯನ್ನು ಅವರು ಹಾಡಿದ್ದಾರೆ. 
ಅಮೀರ್ ಈ ಹಾಡಿನ ವಿಡಿಯೋ ರೆಕಾರ್ಡ್ ಮಾಡಿ ಮುಗಿಸಿದ್ದು, ಇದು ಮೊದಲ ಬಾರಿಗೆ ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. 
ಈ ಕಾರ್ಯಕ್ರಮವನ್ನು ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಜೊತೆಗೆ ಅರ್ಜುನ್ ಕಪೂರ್ ನಡೆಸಿಕೊಡಲಿದ್ದು, ಅಲ್ಲಿ ವಿಡಿಯೋ ಬಿಡುಗಡೆಯಾಗಲಿದೆ. 
ನಿತೇಶ್ ತಿವಾರಿ ನಿರ್ದೇಶನದ 'ದಂಗಾಲ್' ಡಿಸೆಂಬರ್ ೨೩ ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com