ಗೌತಮಿ ನಾನು ಬೇರೆಯಾಗಿರುವ ಬಗ್ಗೆ ನಾನು ಎಲ್ಲೂ ಹೇಳಿಕೆ ನೀಡಿಲ್ಲ: ಕಮಲ್ ಹಾಸನ್

ನಟಿ ಗೌತಮಿ ಅವರಿಂದ ಬೇರ್ಪಟ್ಟಿರುವ ವಿಚಾರವಾಗಿ ನಾನು ಎಲ್ಲೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಟ ಕಮಲ್ ಹಾಸನ್ ಸ್ಪಷ್ಟನೆ...
ಕಮಲ್ ಹಾಸನ್ ಮತ್ತು ಗೌತಮಿ
ಕಮಲ್ ಹಾಸನ್ ಮತ್ತು ಗೌತಮಿ
Updated on

ಚೆನ್ನೈ: ನಟಿ ಗೌತಮಿ ಅವರಿಂದ ಬೇರ್ಪಟ್ಟಿರುವ ವಿಚಾರವಾಗಿ ನಾನು  ಎಲ್ಲೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಟ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದಂತೆ ನಾನು ಈ ವಿಷಯವಾಗಿ ಎಲ್ಲಿಯೂ, ಯಾವುದೇ ಹೇಳಿಕೆ ನೀಡಿಲ್ಲ, ಕೆಲವರು ನನ್ನ ಹೆಸರನ್ನು ಬಳಸಿಕೊಂಡು , ನನ್ನ ಹೆಸರಿನಲ್ಲಿ ಹೇಳಿಕೆ ನೀಡುವ ಮೂಲಕ ಆಟವಾಡುತ್ತಿರುವುದು ಸರಿಯಲ್ಲ ಎಂದು ಕಮಲ್‌ ತಮಿಳಿನಲ್ಲಿ ಟ್ವೀಟ್‌ ಮಾಡಿದ್ದಾರೆ.

ಇನ್ನೂ ಈ ಸಂಬಂಧ ಸ್ಪಷ್ಟನೆ ನೀಡಿರುವ ನಟಿ ಹಾಗೂ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್, ನಾನು ಯಾರೋಬ್ಬರ ವಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದಿಲ್ಲ, ಪ್ರತಿಯೊಬ್ಬರ ನಿರ್ಧಾರವನ್ನು ನಾನು ಗೌರವಿಸುತ್ತೇನೆ.ನನಗೆ ನನ್ನ ಕುಟುಂಬವಷ್ಟೇ ಮುಖ್ಯ. ನನ್ನ ಕುಟುಂಬವನ್ನು ನಾನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com