"ಭರ್ಜರಿ"ಗೆ ಚಾಲೆಂಜಿಂಗ್ ಸ್ಚಾರ್ ವಾಯ್ಸ್, ಕರಿಯಾ ನನ್ನ ಫೇವರಿಟ್ ಎಂದ ಧ್ರುವ ಸರ್ಜಾ!

ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ ಇತ್ತ ಚಿತ್ರತಂಡದಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ.
ಭರ್ಜರಿ ಚಿತ್ರದ ವಾಯ್ಸ್ ಓವರ್ ರೆಕಾರ್ಡಿಂಗ್ ವೇಳೆ ದರ್ಶನ್ ಹಾಗೂ ಧ್ರುವಾ
ಭರ್ಜರಿ ಚಿತ್ರದ ವಾಯ್ಸ್ ಓವರ್ ರೆಕಾರ್ಡಿಂಗ್ ವೇಳೆ ದರ್ಶನ್ ಹಾಗೂ ಧ್ರುವಾ
Updated on: 

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ ಇತ್ತ ಚಿತ್ರತಂಡದಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ.

ಚಿತ್ರಕ್ಕೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ವಾಯ್ಸ್ ಓವರ್ ನೀಡಿದ್ದಾರಂತೆ. ಹೌದು ಈ ವಿಚಾರವನ್ನು ಸ್ವತಃ ಚಿತ್ರದ ನಾಯಕ ನಟ ಧ್ರುವ ಸರ್ಜಾ ಹೇಳಿಕೊಂಡಿದ್ದು, ದರ್ಶನ್ ಅವರ ವಾಯ್ಸ್  ನಿಂದ ಚಿತ್ರದ ತೂಕ ಹೆಚ್ಚಾಗಿದೆ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ ವಾಯ್ಸ್ ಓವರ್ ನೀಡುವ ಕುರಿತು ಚಿತ್ರತಂಡ ತಲೆಕೆಡಿಸಿಕೊಂಡು ಕುಳಿತಿದ್ದಾಗ ನಟ ಧ್ರುವ ಸರ್ಜಾ ಅವರೇ ದರ್ಶನ್ ಅವರು ನೀಡಿದರೆ ಹೇಗೆ ಎಂಬ ಉಪಾಯವನ್ನು ನೀಡಿದ್ದರಂತೆ. ಕೇವಲ ಹೇಳಿದ್ದು ಮಾತ್ರವಲ್ಲದೇ ಖುದ್ಧು  ದರ್ಶನ್ ಅವರಿಗೆ ಫೋನಾಯಿಸಿ ಮಾತನಾಡಿದರಂತೆ. ದರ್ಶನ್ ಒಪ್ಪಿಕೊಳ್ಳುವುದಿಲ್ಲ ಎಂಬ ಅಳುಕಿನಿಂದಲೇ ಧ್ರುವ ಫೋನ್ ಮಾಡಿದ್ದರಾದರೂ, ಅಚ್ಚರಿ ಎನ್ನುವಂತೆ ದರ್ಶನ್ ಅವರು ಮರು ಮಾತಿಲ್ಲದೇ ವಾಯ್ಸ್ ನೀಡಲು  ಒಪ್ಪಿಕೊಂಡಿದ್ದಾರಂತೆ.

ಅದರಂತೆ ಕಳೆದ ಶನಿವಾರ ಚಿತ್ರತಂಡ ದರ್ಶನ್ ವಾಯ್ಸ್ ಓವರ್ ರೆಕಾರ್ಡಿಂಗ್ ಮುಗಿಸಿದ್ದು, ಸುಮಾರು 10 ನಿಮಿಷಗಳ ದರ್ಶನ್ ವಾಯ್ಸ್ ಓವಕ್ ಚಿತ್ರದಲ್ಲಿರಲಿದೆಯಂತೆ. ಇದೀಗ ಚಿತ್ರದ ಇತರೆ ಕಾರ್ಯಗಳತ್ತ ಚಿತ್ರ ತಂಡ ಗಮನ  ಹರಿಸಿದೆ.

ಇನ್ನು ದರ್ಶನ್ ಅವರ ವಾಯ್ಸ್ ಓವರ್ ಗೆ ಸಂಬಂಧಿಸಿದಂತೆ ಮಾತನಾಡಿರುವ ಧ್ರುವ ಸರ್ಜಾ, ನಿಜಕ್ಕೂ ನನಗೆ ಇದು ಖುಷಿಯ ವಿಚಾರ. ಕನ್ನಡ ಚಿತ್ರರಂಗದಲ್ಲಿ ನಾನಿನ್ನೂ ಎಳೆಕೂಸು. ಆದರೂ ಧೈರ್ಯ ಮಾಡಿ ದರ್ಶನ್ ಅವರಿಗೆ  ಕರೆ ಮಾಡಿದ್ದೆ. ಅದರೆ ದರ್ಶನ್ ಅವರು ಮರು ಮಾತಿಲ್ಲದೇ ಒಪ್ಪಿಕೊಂಡು ವಾಯ್ಸ್ ಓವರ್ ಮುಗಿಸಿಕೊಟ್ಟಿದ್ದಾರೆ. ನಾನು ದರ್ಶನ್ ಅವರ ಕರಿಯಾ ಚಿತ್ರ ನೋಡುವಾಗ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದೆ. ಅಂದಿನಿಂದಲೇ ಅವರ  ವಾಯ್ಸ್ ನನಗೆ ಇಷ್ಟವಾಗಿತ್ತು. ಕರಿಯಾ ಚಿತ್ರ ನನ್ನ ಫೇವರಿಟ್ ಚಿತ್ರ ಎಂದು ಧ್ರುವ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com