ನಿನಾಸಂ ಸತೀಶ್ ಅಭಿನಯದ 'ಗೋಧ್ರಾ' ಸಿನಿಮಾಗೆ ಆಗಸ್ಟ್ 12 ರಂದು ಶಿವಣ್ಣ ಕ್ಲಾಪಿಂಗ್

ನೀನಾಸಂ ಸತೀಶ್ ಅಭಿನಯದ ಟೈಗರ್ ಗಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಚಿತ್ರ 'ಅಯೋಗ್ಯ' ಕಳೆದ ವಾರ ಕಿಚ್ಚ ಸುದೀಪ್ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on
ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಟೈಗರ್ ಗಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಚಿತ್ರ 'ಅಯೋಗ್ಯ' ಕಳೆದ ವಾರ ಕಿಚ್ಚ ಸುದೀಪ್ ಕ್ಲಾಂಪಿಂಗ್ ಮಾಡಿದ್ದಾರೆ.
ಸತೀಶ್ ಮತ್ತೊಂದು ಸಿನಿಮಾವನ್ನು ಆಗಸ್ಟ್  12 ರಂದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಲಾಂಚ್ ಮಾಡಲಿದ್ದಾರೆ.
ಗೋಧ್ರಾ ಸಿನಿಮಾವನ್ನು ನಂದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ನಂದೀಶ್ ಜಾಕೋಬ್ ವರ್ಗೀಸ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ನಿನಾಸಂ ಸತೀಶ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಪರೇಷನ್ ಅಲಮೇಲಮ್ಮ ಹಾಗೂ ತಮಿಳಿನ ವಿಕ್ರಮ ವೇದ ನಂತರ ಶ್ರದ್ಧಾ ಶ್ರೀನಾಥ್ ತೆಲುಗಿನಲ್ಲಿ ನಟಿಸುತ್ತಿದ್ದಾರೆ.
ಶೀಘ್ರವೇ ಗೋಧ್ರಾ ಶೂಟಿಂಗ್ ಆರಂಭವಾಗಲಿದ್ದು, ಕುಕ್ಕೆ ಸುಬ್ರಮಣ್ಯದಲ್ಲಿ ಮೊದಲ ಶೂಟಿಂಗ್ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com