ಶಿವಣ್ಣನ ಮಾಸ್ ಲೀಡರ್ ಸಿನಿಮಾ ವೀಕ್ಷಿಸಿದ ಸುದೀಪ್ ಕುಟುಂಬ!

ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ನಡುವೆ ...
ಸುದೀಪ್
ಸುದೀಪ್
ಬೆಂಗಳೂರು: ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ನಡುವೆ ಉತ್ತಮ ಸ್ನೇಹ ಬೆಳೆದಿದೆ.
ಮಾಸ್ ಲೀಡರ್ ಮೊದಲ ಟ್ರೇಲರ್ ವೀಕ್ಷಿಸಿದ, ಸುದೀಪ್ ನಾಳೆ ತೆರೆ ಕಾಣುತ್ತಿರುವ ಮಾಸ್ ಲೀಡರ್ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಬುಧವಾರ ಸುದೀಪ್ ಮತ್ತು ಅವರ ಕುಟುಂಬಸ್ಥರಿಗಾಗಿ ಶಿವಣ್ಣನ ಮನೆಯಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. 
ಲಂಡನ್ ನಲ್ಲಿ ಶಿವಣ್ಣ ಪತ್ನಿ ಗೀತಾ ಅವರ ಜೊತೆ ಸುದೀಪ್ ಈ ವಿಷಯ ಚರ್ಚಿಸಿದ್ದರು. ಹೀಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ದಿ ವಿಲ್ಲನ್ ನಿರ್ಮಾಪಕ ಸಿ.ಆರ್ ಮನೋಹರ್, ತರುಣ್ ಶಿವಪ್ಪ, ನಹಸಿಂಹ ಸೇರಿದಂತೆ ಹಲವರು ಸುದೀಪ್ ಜೊತೆ ನಂತರ ಸಿನಿಮಾ ವೀಕ್ಷಿಸಿದ್ದಾರೆ. 
ಮಾಸ್ ಲೀಡರ್ ನಲ್ಲಿ ವಿಜಯ್ ರಾಘವೇಂದ್ರ, ಯೋಗೇಶ್, ಗುರುರಾಜ್ ಜಗ್ಗೇಶ್, ಪ್ರಣೀತಾ ಸುಭಾಷ್. ಶರ್ಮಿಳಾ ಮಾಂಡ್ರೆ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com