'ತಾರಕ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಾಂಗ್ ಟೀಸರ್ ಟ್ರೆಂಡ್ ಆರಂಭ

ಸಿನಿಮಾ ಟೀಸರ್ ಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಆರಂಭವಾಗಿದೆ, ಅರ್ಜುನ್ ಜನ್ಯ ತಾರಕ್ ಸಿನಿಮಾ ಮೂಲಕ ಸಾಂಗ್ ಟೀಸರ್ ..
ತಾರಕ್ ಸಿನಿಮಾ ಸ್ಟಿಲ್
ತಾರಕ್ ಸಿನಿಮಾ ಸ್ಟಿಲ್
Updated on
ಬೆಂಗಳೂರು: ಸಿನಿಮಾ ಟೀಸರ್ ಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಆರಂಭವಾಗಿದೆ, ಅರ್ಜುನ್ ಜನ್ಯ ತಾರಕ್ ಸಿನಿಮಾ ಮೂಲಕ ಸಾಂಗ್ ಟೀಸರ್ ರಿಲೀಸ್ ಮಾಡಿದ್ದಾರೆ.
ಪ್ರಕಾಶ್ ಜಯರಾಂ ನಿರ್ದೇಶನದ ತಾರಕ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆಡಿಯೋ ಬಿಡುಗಡೆಗೂ ಮುನ್ನ ಸಾಂಗ್ ನ ಟೀಸರ್ ರಿಲೀಸ್ ಮಾಡಿದ್ದಾರೆ. ದರ್ಶನ್ 49ನೇ ಸಿನಿಮಾವಾದ ತಾರಕ್ ನಲ್ಲಿ ಶೃತಿ ಹರಿಹರನ್ ಮತ್ತು ಸಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ನಟಿಸಿದ್ದಾರೆ. ಸಾಂಗ್ ಟೀಸರ್ ಆನ್ ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಂಗ್ ಟೀಸರ್ ಬಿಡುಗಡೆ ಮಾಡುವುದರಿಂದ ಕೇಳುಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಹಿಗಾಗಿ ಪೂರ್ಣ ಹಾಡು ಕೇಳಲು ಉತ್ಸುಕರಾಗಿರುತ್ತಾರೆ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.
ಸಿನಿಮಾದ ಪ್ರೋಮೋ ಗಳಂತೆ ಸಾಂಗ್ ಟೀಸರ್ ಕೂಡ ಸಂಗೀತ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಇದು ನನ್ನ ಕಡೆಯಿಂದ ಮೊದಲ ಪ್ರಯೋಗ, ಈ ಟ್ರೆಂಡ್ ಜನಪ್ರಿಯವಾಗುತ್ತದೆ ಎಂದು ಅರ್ಜುನ್ ಜನ್ಯ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸಾಂಗ್ ಟೀಸರ್ ರಿಲೀಸ್ ಮಾಡಿದ 48 ಗಂಟೆಗಳಲ್ಲಿ 3 ಲಕ್ಷ ಹಾಗೂ ಎರಡನೇ ಸಾಂಗ್ ಟೀಸರ್ ರಿಲೀಸ್ ಮಾಡಿದ 24 ಗಂಟೆಗಳಲ್ಲಿ 1.50 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಸಾಂಗ್ ಟೀಸರ್ ಹಾಡುಗಳ ಸ್ಯಾಂಪಲ್ ಆಗಿದೆ ಎಂದು ಜನ್ಯ ವಿವರಿಸಿದ್ದಾರೆ.
ಸಾಂಗ್ ಟೀಸರ್ ನಲ್ಲಿ ಕಡಿಮೆ ಹಾಡುಗಳಿರುವುದರಿಂದ ಕೇಳುಗರಲ್ಲಿ ಪೂರ್ತಿ ಹಾಡು ಕೇಳಬೇಕೆಂಬ ಕುತೂಹಲ ಮೂಡುತ್ತದೆ. ಇದೊಂದು ಕ್ಯಾಚಿ ಟ್ರೆಂಡ್ ಆಗಿದೆ ಎಂದು ಗಾಯಕಿ ಇಂದು ನಾಗರಾಜ್ ಹೇಳಿದ್ದಾರೆ. 
ತಾರಕ್ ಸಿನಿಮಾದ ಆಡಿಯೋ ರೈಟ್ಸ್ ಅನ್ನು ಲಹರಿ ಸಂಸ್ಥೆ ಖರೀದಿಸಿದೆ. ಇದೊಂದು ಹೊಸ ಪ್ರಯೋಗವಾಗಿದ್ದು, ಈ ಟ್ರೆಂಡ್ ಕ್ಲಿಕ್ ಆಗಲಿದೆ ಎಂದು ಲಹರಿ ಸಂಸ್ಥೆ ವೇಲು ತಿಳಿಸಿದ್ದಾರೆ.
ಸಿನಿಮಾದ ಹಾಡುಗಳನ್ನು ಪ್ರಮೋಟ್ ಮಾಡಲು ಸಾಂಗ್ ಟೀಸರ್ ಹೊಸ ಐಡಿಯಾ ಆಗಿದೆ, ಇದಕ್ಕೆ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರು ಒಟ್ಟಾಗಿ ಶ್ರಮಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com