ತಾಯಿಗೆ ತಕ್ಕ ಮಗ ಚಿತ್ರದಲ್ಲಿ 'ಬ್ರೂಸ್ ಲೀ' ನೆನಪಿಸಲಿರುವ ಅಜೇಯ್ ರಾವ್

ಕೃಷ್ಣ ಅಜೇಯ್ ರಾವ್ ಅಭಿನಯಿಸುತ್ತಿರುವ ತಾಯಿಗೆ ತಕ್ಕ ಮಗಾ ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗುತ್ತಿದೆ. ಅಜೇಯ್ ರಾವ್ ಗೆ ಇದು 25ನೇ ಚಿತ್ರವಾಗಿದೆ...
ಕೃಷ್ಣ ಅಜೇಯ್ ರಾವ್
ಕೃಷ್ಣ ಅಜೇಯ್ ರಾವ್
Updated on
ಕೃಷ್ಣ ಅಜೇಯ್ ರಾವ್ ಅಭಿನಯಿಸುತ್ತಿರುವ ತಾಯಿಗೆ ತಕ್ಕ ಮಗಾ ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗುತ್ತಿದೆ. ಅಜೇಯ್ ರಾವ್ ಗೆ ಇದು 25ನೇ ಚಿತ್ರವಾಗಿದೆ. 
ತಾಯಿಗೆ ತಕ್ಕ ಮಗ ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಚಿತ್ರವಾಗಿದೆ. ಈ ಚಿತ್ರವನ್ನು ವೇದ್ ಗುರು ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅಜೇಯ್ ರಾವ್ ಅವರನ್ನು ಸಂದರ್ಶಿಸಿದಾಗ ಇದು ನನ್ನ ಸಿಲ್ವರ್ ಜ್ಯೂಬಿಲಿ ಚಿತ್ರ. ನನ್ನ 25ನೇ ಚಿತ್ರ ಅತ್ಯುತ್ತಮ ಚಿತ್ರವಾಗಿರಬೇಕು ಎಂದು ನಾನು ಭಾವಿಸಿದ್ದೆ. ಅಂತೆ ನನಗೆ ಈ ಚಿತ್ರ ಸಿಕ್ಕಿದೆ. ಇದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. 
ನಾನು ಎಷ್ಟೇ ಪ್ರಯತ್ನ ಪಟ್ಟಿದ್ದರು ಇಂತಹ ಉತ್ತಮ ಯೋಜನೆ ನನ್ನ ಕೈಯಲ್ಲಿ ಸಿಗುತ್ತಿರಲಿಲ್ಲ. ನಾನು ನನ್ನ ಮೊದಲ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಂತೆ ಈ ಚಿತ್ರದಲ್ಲೂ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ಈ ಚಿತ್ರವು ಬದ್ಧತೆಯಿಂದ ಕೂಡಿದೆ ಹಾಗೂ ನಾನು ಪ್ರತಿ ಚಿತ್ರದಲ್ಲೂ ಹೊಸ ಬಗೆಯ ಜವಾಬ್ದಾರಿಯನ್ನು ಇಷ್ಟಪಡುತ್ತೇನೆ ಎಂದರು. 
ಇಲ್ಲಿ ವಯಸ್ಸು ಗಣನೆಗೆ ಬರುವುದಿಲ್ಲ. ತಾಯಿಗೆ ತಕ್ಕ ಮಗ ನನಗೆ ಇನ್ನೊಂದು ಚಿತ್ರವಷ್ಟೇ. ಉದ್ಯಮದಲ್ಲಿ ನಿಮ್ಮ ಹಿರಿಯತೆಯನ್ನು ಗುರುತಿಸುವಾಗ ಮಾತ್ರ ನಿಮ್ಮ ಚಿತ್ರಗಳ ಲೆಕ್ಕ ಬೇಕಾಗುತ್ತದೆ. ತಾಜ್ ಮಹಲ್ ಅಥವಾ ಕೃಷ್ಣನ್ ಲವ್ ಸ್ಟೋರಿ ಚಿತ್ರ ಬಿಡುಗಡೆಯಾದಾಗ ನಾನು ಒಂದು ಬಿಗ್ ಹಿಟ್ ಚಿತ್ರ ನೀಡಬೇಕು ಎಂದಷ್ಟೇ ಭಾವಿಸಿದ್ದೆ ಎಂದು ಅಜೇಯ್ ರಾವ್ ಹೇಳಿದ್ದಾರೆ. 
ಹದಿನಾಲ್ಕು ವರ್ಷಗಳ ಹಿಂದಿನ ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ನನಗೆ ತಾಯಿಯಾಗಿ ಸುಮಲತಾ ಮೇಡಂ ಅಭಿನಯಿಸಿದ್ದರು. ಅದಾದ ಬಳಿಕ ಇದೇ ಮತ್ತೆ ಅವರು ಈ ಚಿತ್ರದಲ್ಲಿ ತಾಯಿಯಾಗಿ ಅಭಿನಯಿಸುತ್ತಿದ್ದಾರೆ. ಇದು ನನ್ನ ಅದೃಷ್ಟ. ಎರಡನೇಯದಾಗಿ ನಾನು ಈ ಚಿತ್ರದಲ್ಲಿ ನನ್ನ ಕರಾಟೆ ಪ್ರಾವಿಣ್ಯತೆಯನ್ನು ತೋರಿಸುತ್ತಿದ್ದೇನೆ. ಮುಖ್ಯವಾಗಿ ನಾನು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದೇನೆ. ಚಿತ್ರರಂಗಕ್ಕೆ ಬರುವ ಮುನ್ನ ನಾನು ಕರಾಟೆಯನ್ನು ಹೇಳಿಕೊಡುತ್ತಿದ್ದೇ ಎಂದು ಅಜೇಯ್ ರಾವ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com