ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಶ್ವೇತಾ ಶ್ರೀವಾತ್ಸವ್!

ಕನ್ನಡದ ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್‍ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್ (ಸಂಗ್ರಹ ಚಿತ್ರ)
ನಟಿ ಶ್ವೇತಾ ಶ್ರೀವಾತ್ಸವ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕನ್ನಡದ ಖ್ಯಾತ ನಟಿ ಶ್ವೇತಾ ಶ್ರೀವಾತ್ಸವ್‍ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

ಹೆಣ್ಣು ಮಗು ಜನನದ ಕುರಿತು ಶ್ವೇತಾ ಟ್ವೀಟ್ ಮಾಡಿದ್ದು, ಹೆಣ್ಣು ಮಗು ಆಗಿರುವ ವಿಚಾರವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು ಎಂದು ಟ್ವೀಟ್  ಮಾಡಿದ್ದಾರೆ. ಇನ್ನು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಶ್ವೇತಾ ಅವರ ಪತಿ ಅಮಿತ್ ಹೇಳಿದ್ದಾರೆ.

ಈ ಹಿಂದೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತಮ್ಮ ಹೊಟ್ಟೆಯ ಮೇಲೆ ಬಣ್ಣದ ಚಿತ್ತಾರ ಮಾಡಿಸಿಕೊಂಡು ಟ್ವೀಟ್ ಮಾಡಿದ್ದ ನಟಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಖ್ಯಾತ 3ಡಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಶ್ವೇತಾ  ಶ್ರೀವಾತ್ಸವ್ ಹೊಟ್ಟೆಯಲ್ಲಿ ಮಲಗಿರುವ ಮಗುವಿನ ಚಿತ್ರವನ್ನು ಸುಂದರವಾಗಿ ಬಿಡಿಸಿದ್ದರು. ಹೊಟ್ಟೆಯ ಮೇಲೆ ಮೆಹಂದಿ ಚಿತ್ತಾರ ಹಾಕಿಸಿಕೊಂಡು ಪೋಸ್ ಕೊಟ್ಟಿರೋ ಶ್ವೇತಾ ಶ್ರೀವಾತ್ಸವ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com