ಖ್ಯಾತ ಗಾಯಕ ಹಿಮೇಶ್ ರೇಶಮ್ಮಿಯಾ 22 ವರ್ಷದ ದಾಂಪತ್ಯ ಜೀವನ ಅಂತ್ಯ

ಬಾಲಿವುಡ್ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾರವರ ವೈವಾಹಿಕ ಜೀವನದ ವಿಚ್ಛೇದನಕ್ಕೆ ಮುಂಬೈ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ...
ಬಾಲಿವುಡ್ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ  ಹಿಮೇಶ್ ರೇಶಮ್ಮಿಯಾ ಹಾಗೂ ಕೋಮಲ್
ಬಾಲಿವುಡ್ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ಹಾಗೂ ಕೋಮಲ್
Updated on: 
ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ರವರ ವೈವಾಹಿಕ ಜೀವನದ ವಿಚ್ಛೇದನಕ್ಕೆ ಮುಂಬೈ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ. 
ಗಾಯಕ ಹಿಮೇಶ್ ರೇಶಮ್ಮಿಯಾ ಪತ್ನಿ ಕೋಮಲ ಅವರು ವೈವಾಹಿಕ ಜೀವನಕ್ಕೆ ವಿಚ್ಛೇದನ ಕೋರಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. 
ಈ ಆರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ  ಹಿಮೇಶ್ ರೇಶಮ್ಮಿಯಾರವರು ತಮ್ಮ ವೈವಾಹಿಕ ಜೀವನದಿಂದ ಬೇರ್ಪಡಬಹುದು ಎಂದು ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಹಿನ್ನಲೆಯಲ್ಲಿ ಹಿಮೇಶ್ ರೇಶಮ್ಮಿಯಾ ಮತ್ತು ಕೋಮಲ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ಹಿಮೇಶ್ ರೇಶಮ್ಮಿಯಾ ಹಾಗೂ ಕೋಮಲ ಅವರು ತಮ್ಮ 22 ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 
ವಿಚ್ಚೇದನಕ್ಕೆ ಅರ್ಜಿ ಸಲ್ಲಿವುದಕ್ಕೂ ಮುನ್ನವೇ ದಂಪತಿಗಳು ಸ್ವಲ್ಪ ಸಮಯದವರೆಗೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ದಂಪತಿಗಳಿಗೆ ಸ್ವಯಂ ಎಂಬ ಪುತ್ರನಿದ್ದಾನೆ. 
ಜೀವನದಲ್ಲಿ ಪರಸ್ಪರ ಗೌರವ ಅತ್ಯಂತ ಮುಖ್ಯವಾದದ್ದು. ನಮ್ಮ ಸಂಬಂಧಕ್ಕೆ ಗೌರವ ನೀಡಿ ಕೋಮಲ್ ಹಾಗೂ ನಾನು ವಿಚ್ಛೇದನ ಪಡೆದು ದೂರಾಗುತ್ತಿದ್ದೇವೆಂದು ಹಿಮೇಶ್ ರೇಶಮ್ಮಿಯಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com