ನಟ ಕಮಲ್ ಹಾಸನ್ ರಿಂದ ಇಂಗ್ಲೆಂಡ್ ರಾಣಿ ಕ್ವೀನ್ ಎಲಿಜಬೆತ್ ಭೇಟಿ

ಬಹುಭಾಷಾ ನಟ ಕಮಲ್ ಹಾಸನ್ ಕ್ವೀನ್‌ ಎಲಿಜಬೆತ್‌ II ಬಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ...
ಕಮಲ್ ಹಾಸನ್ -ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II ಭೇಟಿ
ಕಮಲ್ ಹಾಸನ್ -ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II ಭೇಟಿ
Updated on

ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಕ್ವೀನ್‌ ಎಲಿಜಬೆತ್‌ II ಬಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಯುಕೆ- ಇಂಡಿಯಾ ಇಯರ್ ಆಫ್ ಕಲ್ಚರ್ 2017 ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಮಲ್‌ ಎಲಿಜಬೆತ್ II ರ ಭೇಟಿ ಕುರಿತಂತೆ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು 1997ರ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.

1997ರಲ್ಲಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II ಭಾರತಕ್ಕೆ ಭೇಟಿ ಕೊಟ್ಟಾಗ ಅವರು ಕಮಲ್ ಅಭಿನಯಿಸುತ್ತಿದ್ದ  'ಮರುಧನಾಯಗಂ' ಚಿತ್ರದ ಶೂಟಿಂಗ್‌ ಸೆಟ್‌ಗೆ ಭೇಟಿ ಕೊಟ್ಟಿದ್ದರು. ಆ ಸಂದರ್ಭವನ್ನು ಕಮಲ್‌ಹಾಸನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕ್ವೀನ್‌ ಎಲಿಜಬೆತ್‌ ತನ್ನ ಇಡೀ ಜೀವನದಲ್ಲಿ ನೋಡಿರುವ ಏಕೈಕ ಸಿನಿಮಾ ಶೂಟಿಂಗ್‌ ಬಹುಶಃ ಇದೇ ಆಗಿರಬಹುದು ಎಂದು ಕಮಲ್ ಸಾಮಾಜಿಕ ಜಾಲತಾಣಗಳಲ್ಲಿ ಆ ದಿನಗಳನ್ನು ಸ್ಮರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com