ಪುತಿಯಾ ಮುಕಾಮ್ ಮಲಯಾಳಂ ಸಿನಿಮಾ ನಿರ್ದೇಶಕ ದಿಫನ್ ಇನ್ನಿಲ್ಲ

ಮೂತ್ರ ಪಿಂಡ ವೈಫಲ್ಯದಿಂದ ಮಲಯಾಳಂ ಸಿನಿಮಾ ನಿರ್ದೇಶಕ ದಿಫನ್ ಸಾವನ್ನಪ್ಪಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ ಸಂಬಂಧ ಶಸ್ತ್ರ ಚಿಕಿತ್ಸೆಗಾಗಿ...
ದಿಫನ್
ದಿಫನ್
Updated on

ಕೊಚ್ಚಿ: ಮೂತ್ರ ಪಿಂಡ ವೈಫಲ್ಯದಿಂದ ಮಲಯಾಳಂ ಸಿನಿಮಾ ನಿರ್ದೇಶಕ ದಿಫನ್ ಸಾವನ್ನಪ್ಪಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ ಸಂಬಂಧ ಶಸ್ತ್ರ ಚಿಕಿತ್ಸೆಗಾಗಿ ಕಳೆದ ಎರಡು ವಾರಗಳ ಹಿಂದೆ ದಾಖಲಾಗಿದ್ದರು.

ಮಲಯಾಳಂ ಡಬ್ಬಿಂಗ್ ಕಲಾವಿದರಾದ ಆನಂದ್ ವಲ್ಲಿ ಮತ್ತು ಚಂದ್ರಶೇಖರ ಪಿಲ್ಲಾಲಿ ಅವರ ಪುತ್ರ ದಿಫನ್. ಶಾಜಿ ಕೈಲಾಸ್ ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2003 ರಲ್ಲಿ ದಿಫನ್  ಲೀಡರ್ ಎಂಬ ಸಿನಿಮಾ ನಿರ್ದೇಶಿಸಿದ್ದರು. ಕೇರಳದ ರಾಜಕೀಯ ಘಟನೆಗಳ ಕುರಿತಾದ ಸಿನಿಮಾ ಇದಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು,

ಮತ್ತೆ ಆರು ವರ್ಷಗಳ ನಂತರ 2009 ರಲ್ಲಿ ಪುತಿಯಾ ಮುಕಾಮಿ ಎಂಬ ಮತ್ತೊಂದು ಸಿನಿಮಾ ನಿರ್ದೇಶಿಸಿ ಸಾಕಷ್ಟು ಹೆಸರು ಮಾಡಿದ್ದರು. ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಈ ಸಿನಿಮಾದಲ್ಲಿ ನಟಿಸಿದ್ದರು.

ದಿಫನ್ ಪತ್ನಿ ದೀಪಾ, ಮಾಧವನ್ ಮತ್ತು ಮಹಾದೇವನ್ ಎಂಬ ಪುತ್ರರನ್ನು ಅಗಲಿದ್ದಾರೆ, ತಿರುವನಂತ ಪುರದಲ್ಲಿ ಮಂಗಳವಾರ ದಿಫಾನ್ ಅಂತ್ಯ ಸಂಸ್ಕಾರ ನೆರವೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com