ಬಿಹಾರದ ಥಿಯೇಟರ್ ನಲ್ಲಿ ಬಾಹುಬಲಿ -2 ಪೈರಸಿ ಕಾಪಿ ತಯಾರು

ಬಿಹಾರದ ಬೇಗು ಸರಾಯ್ ಜಿಲ್ಲೆಯ ಥಿಯೇಟರ್ ನಲ್ಲಿ ಬಾಹುಬಲಿ-2 ಸಿನಿಮಾದ ನಕಲು ಪ್ರತಿ ತಯಾರು ಮಾಡಲಾಗಿದೆ. ಇದೇ ಪೈರಸಿ ತಂಡ ಬ್ಲಾಕ್ ಬಸ್ಟರ್ ...
ಬಾಹುಬಲಿ-2 ಸಿನಿಮಾ ಸ್ಟಿಲ್
ಬಾಹುಬಲಿ-2 ಸಿನಿಮಾ ಸ್ಟಿಲ್
ಹೈದರಾಬಾದ್: ಬಿಹಾರದ ಬೇಗು ಸರಾಯ್ ಜಿಲ್ಲೆಯ ಥಿಯೇಟರ್ ನಲ್ಲಿ ಬಾಹುಬಲಿ-2 ಸಿನಿಮಾದ ನಕಲು ಪ್ರತಿ ತಯಾರು ಮಾಡಲಾಗಿದೆ. ಇದೇ ಪೈರಸಿ ತಂಡ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ-2 ನಿರ್ಮಾಪಕರಿಗೆ ಹಣ ನೀಡುವಂತೆ ಬೆದರಿಕೆ ಒಡ್ಡಿದೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.
ದೆಹಲಿ ಮೂಲದ ಅಂತರರಾಜ್ಯ ಪೈರಸಿ ಗ್ಯಾಂಗ್ ವೊಂದನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ವೀನಾ ಸಿನಿಮಾ ಹಾಲ್ ನ ಮಾಲೀಕ ದಿವಾಕರ್ ಕುಮಾರ್ ಸೇರಿದಂತೆ ಆರು ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಬುಧವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. 2015 ರಲ್ಲಿ ಬಿಡುಗಡೆಯಾದ ಬಾಹುಬಲಿ  ಮೊದಲ ಭಾಗ ವನ್ನು ಪೈರಸಿ ಮಾಡಿದ ಆರೋಪದ ಮೇಲೆ ಜಿತೇಂದರ್ ಮತ್ತು ತೋಪಿಖ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. 
ಹೈದರಾಬಾದ್ ಮೂಲದ ರಾಹುಲ್ ಮೆಹ್ತಾ ಬಾಹುಬಲಿ ಸಿನಿಮಾ ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com