ಚೈನಾದಲ್ಲಿ 'ದಂಗಾಲ್' ಅಭೂತಪೂರ್ವ ಯಶಸ್ಸು; ಅಮೀರ್ ಗೆ ಅಭಿನಂದಿಸಿದ ರಹಮಾನ್

ಚೈನಾದಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ 'ದಂಗಾಲ್' ಬಾಕ್ಸ್ ಆಫಿಸ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡ ಹಿನ್ನಲೆಯಲ್ಲಿ, ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ಎ ಆರ್ ರಹಮಾನ್
ಅಮೀರ್ ಖಾನ್-ಎ ಆರ್ ರಹಮಾನ್
ಅಮೀರ್ ಖಾನ್-ಎ ಆರ್ ರಹಮಾನ್
ಚೆನ್ನೈ: ಚೈನಾದಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ 'ದಂಗಾಲ್' ಬಾಕ್ಸ್ ಆಫಿಸ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡ ಹಿನ್ನಲೆಯಲ್ಲಿ, ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ಎ ಆರ್ ರಹಮಾನ್ ಶನಿವಾರ ಅಭಿನಂದನೆ ಸಲ್ಲಿಸಿದ್ದಾರೆ. 
"ಚೀನಿಯರ ಹೃದಯವನ್ನು ಮತ್ತೆ ಗೆದ್ದದ್ದಕ್ಕೆ, ಅಮೀರ್ ಖಾನ್ ಮತ್ತು 'ದಂಗಾಲ್' ತಂಡಕ್ಕೆ ಅಭಿನಂದನೆಗಳು" ಎಂದು ರಹಮಾನ್ ಟ್ವೀಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಚೈನಾದಲ್ಲಿ ಬಿಡುಗಡೆಯಾದ 'ದಂಗಾಲ್' ಮಾರುಕಟ್ಟೆ ಪಂಡಿತರ ಪ್ರಕಾರ ೮೨೫ ಕೋಟಿ ಗಳಿಸಿದೆ. 
ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ೫೦೦ ಕೋಟಿಗೂ ಹೆಚ್ಚು ಗಳಿಸಿತ್ತು. ಮತ್ತು ಈಗ ಜಾಗತಿಕವಾಗಿ ೧೫೦೦ ಕೋಟಿ ರೂ ಗಳಿಕೆ ಕಂಡ ಬೆರಳೆಣಿಕೆಯ ಭಾರತೀಯ ಸಿನೆಮಾಗಳಲ್ಲಿ ಒಂದಾಗಿದೆ. 
ಈ ಸಿನೆಮಾದಲ್ಲಿ ಅಮೀರ್ ಖಾನ್ ಕುಸ್ತಿ ಪಟು ಮಹಾವೀರ್ ಫೋಗಟ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com