ಮದುವೆ ನಂತರ ಹೆಸರು ಬದಲಿಸಿಕೊಂಡ ಸಮಂತಾ: ಟ್ವಿಟ್ಟರಿಗರ ಪ್ರಶಂಸೆ

ಅಕ್ಟೋಬರ್ 6 ರಂದು ನಾಗ ಚೈತನ್ಯ ಜೊತೆ ಹಸೆಮಣೆ ಏರಿದ ಸಮಂತಾ ರುತ್ ಪ್ರಭು ವಿವಾಹದ ನಂತರ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಮಂತ್ ರುತ್ ಪ್ರಭು...
ಸಮಂತಾ ಮತ್ತು ನಾಗ ಚೈತನ್ಯ
ಸಮಂತಾ ಮತ್ತು ನಾಗ ಚೈತನ್ಯ
ಹೈದರಾಬಾದ್:  ಅಕ್ಟೋಬರ್ 6 ರಂದು ನಾಗ ಚೈತನ್ಯ ಜೊತೆ ಹಸೆಮಣೆ ಏರಿದ ಸಮಂತಾ ರುತ್ ಪ್ರಭು ವಿವಾಹದ ನಂತರ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಎಂಬ ಹೆಸರನ್ನು ಟ್ವಿಟ್ಟರ್ ನಲ್ಲಿ ಸಮಂತಾ ಅಕ್ಕಿನೇನಿ  ಎಂದು ಬದಲಾಯಿಸಿಕೊಂಡಿದ್ದಾರೆ, ಇದು ಅವರ ಅಭಿಮಾನಿಗಳ ಪಾಲಿಗೆ ಸಖತ್ ಸಂತಸದ ವಿಷಯವಾಗಿದೆ. 
ಇಷ್ಟು ದಿನ ಸಮಂತಾ ರುತ್ ಪ್ರಭು ಎಂಬ ಹೆಸರಿನಲ್ಲಿದ್ದ ಅವರ ಟ್ವಿಟ್ಟರ್ ಖಾತೆ ಇದೀಗ ಸಮಂತಾ ಅಕ್ಕಿನೇನಿ ಎಂದು ಬದಲಾಗಿದೆ. ನಾಗಚೈತನ್ಯರನ್ನು ವರಿಸಿದ ಬಳಿಕ ಅಕ್ಕಿನೇನಿ ಕುಟುಂಬದ ಭಾಗವಾಗಿರುವ ತಮಿಳು ಮೂಲದ ಸಮಂತಾ ಸರ್ ನೇಮ್ ಬದಲಾಯಿಸಿಕೊಂಡು ಶಾಶ್ವತವಾಗಿ ತೆಲುಗು ನಟಿಯಾಗಿ ಬದಲಾಗಿದ್ದಾರೆ.
ಸಮಂತಾ ತಮ್ಮ ಹೆಸರಿನ ಜತೆ ಅಕ್ಕಿನೇನಿ ಸೇರಿಸಿಕೊಂಡಿರುವ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಅಕ್ಕಿನೇನಿ ಸೊಸೆಗೆ ಸ್ವಾಗತ ಎಂದು ವಿಶ್ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಗೌರವಿಸುತ್ತಿರುವುದಕ್ಕೆ ಸಂಸತ ವ್ಯಕ್ತ ಪಡಿಸಿದ್ದಾರೆ, 
ಇನ್ನೂ ಇದೇ ಶುಕ್ರವಾರ ಸಮಂತಾ ಮಾವ ಅಕ್ಕಿನೇನಿ ನಾಗಾರ್ಜುನ ಜತೆ ಅಭಿನಯಿಸಿರುವ 'ರಾಜುಗಾರಿ ಗದಿ 2' ಇದೇ ಬಿಡುಗಡೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com