'ದಿ ವಿಲನ್' ಗೆ ಇನ್ನು 12 ದಿನಗಳ ಶೂಟಿಂಗ್ ಬಾಕಿ

ತಮ್ಮ ಮುಂಬರುವ ಚಿತ್ರ ವಿಲನ್ ಶೂಟಿಂಗ್ ಮುಗಿಸಲು ನಿರ್ದೇಶಕ ಪ್ರೇಮ್ ಹಗಲಿರುಳು ಶ್ರಮಿಸುತ್ತಿದ್ದು ಈ ...
ದಿ ವಿಲನ್ ಚಿತ್ರದ ಪೋಸ್ಟರ್
ದಿ ವಿಲನ್ ಚಿತ್ರದ ಪೋಸ್ಟರ್
Updated on: 

ತಮ್ಮ ಮುಂಬರುವ ಚಿತ್ರ ವಿಲನ್ ಶೂಟಿಂಗ್ ಮುಗಿಸಲು ನಿರ್ದೇಶಕ ಪ್ರೇಮ್ ಹಗಲಿರುಳು ಶ್ರಮಿಸುತ್ತಿದ್ದು ಈ ತಿಂಗಳಾತ್ಯಂಕ್ಕೆ ಕೆಲಸ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇನ್ನು ಕೇವಲ 12 ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು ಸುದೀಪ್ ಜೊತೆ ಹಾಡೊಂದಕ್ಕೆ ಆಮಿ ಜಾಕ್ಸನ್ ಬೆಂಗಳೂರಿಗೆ ಬರಲು ನಿರ್ದೇಶಕ ಪ್ರೇಮ್ ಕಾಯುತ್ತಿದ್ದಾರೆ.

ಅದರ ಚಿತ್ರೀಕರಣ ನಾಲ್ಕು ದಿನಗಳ ಕಾಲ ನಡೆಯಲಿದೆ. ಅಷ್ಟು ಹೊತ್ತಿಗೆ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ಮುಗಿಸಿ ನಂತರ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಲಿದ್ದಾರೆ.

ಚಿತ್ರದ ಟೀಸರ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಂತಸದ ಸುದ್ದಿಯಿದೆ. ಈ ಶೂಟಿಂಗ್ ಶೆಡ್ಯೂಲ್ ಮಧ್ಯೆ ಚಿತ್ರದ ಟೀಸರ್ ಬಿಡುಗಡೆಮಾಡುವ ಸಾಧ್ಯತೆಯಿದ್ದು ಶಿವರಾಜ್ ಕುಮಾರ್, ಸುದೀಪ್, ಆಮಿ ಜಾಕ್ಸನ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಎರಿಕ್ ಪಿಳ್ಳೈ ಅವರು ಟೀಸರ್ ನ ಸೌಂಡ್ ಮಿಕ್ಸಿಂಗ್ ಮಾಡಿದ್ದು, ಅದು ಟೀಸರ್ ನ ಹೈಲೈಟ್ ಆಗಿರುತ್ತದೆ. ಸಿಆರ್ ಮನೋಹರ್ ನಿರ್ಮಾಣದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬಾಲಿವುಡ್ ನಟ ಮಿಥುಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಕೂಡ ಈ ಚಿತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಗಿರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com