ನಟಿ ಶ್ರೀರೆಡ್ಡಿಗೆ ಟಾಂಗ್ ಕೊಟ್ಟ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ

ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ನಟಿ ಶ್ರೀರೆಡ್ಡಿಗೆ ಟಾಂಗ್ ನೀಡಿದ್ದ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ ಬರುತ್ತಿವೆಯಂತೆ...
ಶ್ರೀರೆಡ್ಡಿ-ಕವಿತಾ ರಾಧೆ ಶ್ಯಾಮ್
ಶ್ರೀರೆಡ್ಡಿ-ಕವಿತಾ ರಾಧೆ ಶ್ಯಾಮ್
ಬೆಂಗಳೂರು: ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ನಟಿ ಶ್ರೀರೆಡ್ಡಿಗೆ ಟಾಂಗ್ ನೀಡಿದ್ದ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ ಬರುತ್ತಿವೆಯಂತೆ. 
ಕವಿತಾ ರಾಧೆ ಶ್ಯಾಮ್ ಅವರು ಶ್ರೀರೆಡ್ಡಿ ವಿರುದ್ಧ ವಿಡಿಯೋ ಬಿಡುಗಡೆ ಮಾಡಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಶ್ರೀರೆಡ್ಡಿಗೆ ಟಾಂಗ್ ನೀಡಿದ್ದರು. ವಿಡಿಯೋ ಅಪ್ಲೋಡ್ ಮಾಡಿದ ನಂತರ ತನಗೆ ವಿಡಿಯೋ ಡಿಲೀಟ್ ಮಾಡುವಂತೆ ಕೆಲವು ನಂಬರ್ ಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ. ಈ ಸಂಬಂಧ ಪೊಲೀಸ್ ಕಮಿಷನರ್ ಕಚೇರಿಗೆ ಇಂದು ಭೇಟಿ ನೀಡಿದ ಕವಿತಾ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ಶ್ರೀರೆಡ್ಡಿ ಅವರು ಅರೆಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಕವಿತಾ ರಾಧೆ ಶ್ಯಾಮ್ ಅರೆಬೆತ್ತಲೆಯಾದ ವಿಡಿಯೋ ಮಾಡಿ ಶ್ರೀರೆಡ್ಡಿಗೆ ತಿರುಗೇಟು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com