ಪೊಗರು ಚಿತ್ರಕ್ಕೆ ತಮಿಳಿನ ವಿಜಯ್ ಮಿಲ್ಟನ್ ಛಾಯಾಗ್ರಾಹಣ!

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಛಾಯಾಗ್ರಾಹಣವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಮಾಡಲಿದ್ದಾರೆ...
ಧ್ರುವ ಸರ್ಜಾ-ವಿಜಯ್ ಮಿಲ್ಟನ್
ಧ್ರುವ ಸರ್ಜಾ-ವಿಜಯ್ ಮಿಲ್ಟನ್
ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಛಾಯಾಗ್ರಾಹಣವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಮಾಡಲಿದ್ದಾರೆ. 
ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. 
ತಮಿಳಿನ ಸೂಪರ್ ಹಿಟ್ ಚಿತ್ರ ಆಟೋಗ್ರಾಫ್ ಗೆ ವಿಜಯ್ ಮಿಲ್ಟನ್ ಛಾಯಾಗ್ರಾಹಣ ಮಾಡಿದ್ದರು. ಅಲ್ಲದೆ ವಝಕ್ಕು ಎನ್ 18/9, ಗೋಲಿ ಸೋಡ ಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದರು. ಅಲ್ಲದೆ ಕನ್ನಡದಲ್ಲಿ ಅಟ್ಟಹಾಸ ಚಿತ್ರಕ್ಕೂ ಛಾಯಾಗ್ರಾಹಣ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com