ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ 'ಸಲಾಂ ರಾಕಿಂಗ್ ಭಾಯ್' ಹಾಡಿನ ಸಾಹಿತ್ಯದ ಕುರಿತು ಕೇಳಿ ಬರುತ್ತಿರುವ ವಿರೋಧಕ್ಕೆ ಚಿತ್ರ ತಂಡ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ನಿರ್ಮಾಪಕ, ವಿತರಕ ಕಾರ್ತೀಕ ಗೌಡ ಅವರು, 'ಸಲಾಂ ರಾಕಿ ಭಾಯ್ ಹಾಡಿಗೆ ಕೆಲವೇ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಡಿನಲ್ಲಿನ ಹಿಂದಿ ಸಾಹಿತ್ಯ ಚಿತ್ರದ ಕಥಾ ಹಂದರದ ಭಾಗವಾಗಿದೆ. ಹೀಗಾಗಿ ಚಿತ್ರವನ್ನು ನೋಡಿದಾಗ ಈ ಹಾಡಿನಲ್ಲಿ ಹಿಂದಿ ಭಾಷೆ ಏಕೆ ಬಳಸಲಾಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಇನ್ನು ಕೆಜಿಎಫ್ ನ ಫಸ್ಟ್ ಸಾಂಗ್ ಪ್ರೀತಿಯಿಂದಲೇ ಮೆಚ್ಚಿಕೊಂಡಿರುವ ಕೆಲವರು, ಹಿಂದಿ ಹೇರಿಕೆಯನ್ನು ಮಾತ್ರ ಖಂಡಿಸಿದ್ದರು. ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಯ ಹಾಡಿನಲ್ಲಿ ಹಿಂದಿ ಬಳಸಲಾಗಿದೆ. ಆದರೆ, ತಮಿಳು ವರ್ಷನ್ ಸಾಂಗ್ ನಲ್ಲಿ ಪೂರ್ತಿ ಆ ಭಾಷೆಯಲ್ಲಿಯೇ ಸಾಂಗ್ ಮೂಡಿ ಬಂದಿರುವುದೇಕೆ. ಇದು ತಮಿಳರ ಒಲೈಕೆ ಅಲ್ಲದೇ ಮತ್ತೇನು ಅಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
And to a very few who r talking abt the hindi lyrics in d song, once u see the movie and the placement of the song in the movie, u will understand y the usage of hindi. Till then cheers