ಕೆಜಿಎಫ್ 'ಗಲಿ ಗಲಿ' ಸಾಂಗ್ ಅಬ್ಬರ: ವಿಶ್ವಾದ್ಯಂತ 24 ಗಂಟೆಯಲ್ಲಿ ಅತಿಹೆಚ್ಚು ವೀಕ್ಷಣೆ!

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿಯನದ ಕೆಜಿಎಫ್ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಚಿತ್ರದ ಗಲಿ ಗಲಿ ಹಾಡು ಬಿಡುಗಡೆಯಾಗಿ 24 ಗಂಟೆಯಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದು ನಂಬರ್ 1 ಸ್ಥಾನದಲ್ಲಿದೆ...
ಯಶ್-ಮೌನಿರಾಯ್
ಯಶ್-ಮೌನಿರಾಯ್
ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿಯನದ ಕೆಜಿಎಫ್ ಚಿತ್ರ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಚಿತ್ರದ ಗಲಿ ಗಲಿ ಹಾಡು ಬಿಡುಗಡೆಯಾಗಿ 24 ಗಂಟೆಯಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದು ನಂಬರ್ 1 ಸ್ಥಾನದಲ್ಲಿದೆ. 
ಹಿಂದಿ ಆವತರಣಿಕೆಯ ಗಲಿ ಗಲಿ ಸಾಂಗ್ ಮೊನ್ನೆಯಷ್ಟೇ ಬಿಡುಗೆಯಾಗಿತ್ತು. ಈ ಹಾಡು 13 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಇದುವರೆಗೆ ಯಾವ ಚಿತ್ರವೂ ಕೂಡ ಇಷ್ಟು ಮಟ್ಟದಲ್ಲಿ ವೀಕ್ಷಣೆಯಾಗಿರಲಿಲ್ಲ.
ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದರ ಸಾಂಗ್ ಇಷ್ಟು ದೊಡ್ಡ ಪ್ರಮಾಣದಲ್ಲಿ ವೀಕ್ಷಣೆಯಾಗುವ ಮೂಲಕ ಟ್ರೆಂಡ್ ಸೃಷ್ಟಿಸಿದೆ. ಇಲ್ಲಿಯವರೆಗೂ 16 ಮಿಲಿಯನ್ ವೀಕ್ಷಣೆಯಾಗಿದೆ.
ಕನ್ನಡದ ಕೆಜಿಎಫ್ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಇದೇ ತಿಂಗಳ 21ರಂದು ಬಿಡುಗಡೆಯಾಗುತ್ತಿದ್ದು ದೇಶಾದ್ಯಂತ ಸರಿಸುಮಾರು 2 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com