ಸಿನಿಮಾ ಸುದ್ದಿ

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು: ನಟ ಯಶ್

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು: ನಟ ಯಶ್
ಸಂಗ್ರಹ ಚಿತ್ರ
Published On :
ಬೆಂಗಳೂರು: ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು ಎಂದು ನಟ ಯಶ್ ಹೇಳಿದ್ದಾರೆ.
ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ನಟ ಯಶ್, 'ಕನ್ನಡ ಚಿತ್ರವೊಂದು ಜಾಗತಿಕಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದು ಕನ್ನಡ ಚಿತ್ರೋದ್ಯಮಕ್ಕೆ ಸಲ್ಲುತ್ತಿರುವ ಗೌರವವೂ ಹೌದು. ಒಳ್ಳೆಯ ವಸ್ತು ಇದ್ದಾಗ ನಾವು ಯಾವ ಭಾಷೆಯ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು. ಕೆಜಿಎಫ್‌ ಇದಕ್ಕೊಂದು ಉದಾಹರಣೆ ಎಂದು ಹೇಳಿದರು.
ನನ್ನ ಜೀವನದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆದ ಘಟನೆಗಳನ್ನು ನಾನೆಂದಿಗೂ ಮರೆಯಲಾರೆ. ಸುಖ, ದುಃಖ ಎರಡನ್ನೂ ಅನುಭವಿಸಿದ್ದೇನೆ. ಮನುಷ್ಯ ನಿರ್ಲಿಪ್ತನಾಗಿರಬೇಕು. ಆಗ ಮಾತ್ರ ಒತ್ತಡವನ್ನು ಸಹಿಸಿಕೊಳ್ಳಬಹುದು ಎಂದ ಅವರು, ಕೆಜಿಎಫ್‌ ಸಿನಿಮಾಕ್ಕಿಂತ ನನಗೆ ಮಗಳು ಜನಿಸಿದ್ದೇ ರೋಮಾಂಚನ ನೀಡಿದೆ. ಅದೊಂದು ಭಾವನಾತ್ಮಕ ವಿಚಾರ. ಸಿನಿಮಾವನ್ನೂ ನಾನು ಅಷ್ಟೇ ಪ್ರೀತಿಸುತ್ತೇನೆ. ಆದರೆ, ಮಗಳಿಗೆ ನನ್ನ ಪ್ರಥಮ ಆದ್ಯತೆ ಎಂದು ಹೇಳಿದರು.
ಅಂತೆಯೇ ಪೈರಸಿ ಕುರಿತು ಮಾತನಾಡಿದ ಯಶ್, 'ಥಿಯೇಟರ್ ನಲ್ಲಿ ಸಿನಿಮಾವನ್ನು ಚಿತ್ರೀಕರಿಸುವುದು ಅಪರಾಧ. ಯಾರೊಬ್ಬರು ಕಾನೂನು ಉಲ್ಲಂಘನೆ ಮಾಡಬಾರದು. ತಪ್ಪು ಎಸಗಿದರೆ ಶಿಕ್ಷೆ ಕಟ್ಟಿಟ್ಟಬುತ್ತಿ. ತಪ್ಪು ಮಾಡಿದ ಬಳಿಕ ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ ಪೊಲೀಸರು ಸುಮ್ಮನಿರುವುದಿಲ್ಲ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.