ಚಿತ್ರ ವೀಕ್ಷಣೆಗಾಗಿ ಮಧ್ಯರಾತ್ರಿಯಿಂದಲೇ ಥಿಯೇಟರ್ ಗಳತ್ತ ಅಭಿಮಾನಿಗಳು ಧಾವಿಸುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ 4 ಗಂಟೆಗೆ ಶೋ ಶುರುವಾಗಿದೆ. ಅಲ್ಲದೇ ಪಟಾಕಿ ಸಿಡಿಸಿ ರಾಕಿಭಾಯ್ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಗೌಡನಪಾಳ್ಯದ ಶ್ರೀನಿವಾಸ್ ಥಿಯೇಟರ್ ನಲ್ಲಿ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದು, ಕುಣಿದು ಕುಪ್ಪಳಿಸಿ, ಕಟೌಟ್ ಮುಂದೆ ತೆಂಗಿನ ಕಾಯಿ ಒಡೆದು ತಮ್ಮ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಿದ್ದಾರೆ.