ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಕ್ವೀನ್ ಟೀಸರ್ ಬಿಡುಗಡೆ!

ಹಿಂದಿಯಲ್ಲಿ ಕಂಗನಾ ರಣಾವತ್ ಅಭಿನಯಿಸಿದ್ದ ಕ್ವೀನ್ ರೀಮೇಕ್ ಚಿತ್ರದ ಟೀಸರ್ ಕನ್ನಡ, ತೆಲುಗು,ಮಲಯಾಳಂ, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ..
ಕ್ವೀನ್ ರಿಮೇಕ್ ಮಲ್ಲಿ ನಟಿಸಿರುವ ನಾಲ್ಕು ನಾಯಕಿಯರು
ಕ್ವೀನ್ ರಿಮೇಕ್ ಮಲ್ಲಿ ನಟಿಸಿರುವ ನಾಲ್ಕು ನಾಯಕಿಯರು
ಮುಂಬಯಿ:  ಹಿಂದಿಯಲ್ಲಿ ಕಂಗನಾ ರಣಾವತ್ ಅಭಿನಯಿಸಿದ್ದ  ಕ್ವೀನ್ ರೀಮೇಕ್ ಚಿತ್ರದ ಟೀಸರ್ ಕನ್ನಡ, ತೆಲುಗು,ಮಲಯಾಳಂ, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ,
ದಕ್ಷಿಣ ಭಾರತದ ಐದು ರಾಜ್ಯಗಳಲ್ಲೂ 2019ರ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ, ಏಕಕಾಲದಲ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗುವುದರಿಂದ ಸಿನಿಮಾ ಮಾರ್ಕೆಟಿಂಗ್ ಗೆ ಅನುಕೂಲವಾಗಲಿದೆ, ದಕ್ಷಿಣ ಭಾರತದ ರಿಮೇಕ್ ಹಕ್ಕನ್ನು ಮನು ಕುಮಾರನ್ ಪಡೆದಿದ್ದಾರೆ.,
ನಾಲ್ಕು ಭಾಷೆಗಳಲ್ಲಿ ಕ್ವೀನ್ ಟೀಸರ್ ಅನ್ನು ವಿಶೇಷವಾಗಿ ತಯಾರಿಸಲಾಗಿದೆ, ಅತ್ಯಂತ ಭಯಾನಕ, ಒತ್ತಡದ ಟೀಸರ್ ತಯಾರಿಸಲಾಗಿದೆ, ಇದೊಂದು ಅದ್ಭುತ ಅನುಭವ ಎಂದು ಮನು ಕುಮಾರನ್ ಹೇಳಿದ್ದಾರೆ.
ನಾಲ್ಕು ಭಾಷೆಗಳಲ್ಲಿ ನಾಲ್ಕು ನಾಯಕಿಯರು ನಟಿಸಿದ್ದು ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com