ತಮಿಳುನಾಡಿನಲ್ಲೂ 'ರಾಕಿ ಭಾಯ್' ಹವಾ, ಕೆಜಿಎಫ್ ಥಿಯೇಟರ್ ಸಂಖ್ಯೆ 100 ರಿಂದ 300ಕ್ಕೆ ಹೆಚ್ಚಳ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ.
ಹೌದು.. ಈ ಬಗ್ಗೆ ತಮಿಳುನಾಡಿನಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ನಟ ವಿಶಾಲ್ ಮಾಲೀಕತ್ವದ ವಿಶಾಲ್ ಫಿಲ್ಮ್ ಫ್ಯಾಕ್ಟರಿ ತನ್ನ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರದ ಸ್ಕ್ರೀನ್ ಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ಡಿಸೆಂಬರ್ 21ರಂದು ಸುಮಾರು 100 ಚಿತ್ರಗಳಲ್ಲಿ ತೆರೆ ಕಂಡಿತ್ತು. ಕೆಜಿಎಫ್ ನೊಂದಿಗೆ ನಟ ಧನುಷ್ ಅಭಿನಯದ ಮಾರಿ-2 ಮತ್ತು ಶಾರುಖ್ ಖಾನ್ ರ ಜೀರೋ ಚಿತ್ರಗಳೂ ಕೂಡ ಬಿಡುಗಡೆಯಾಗಿದ್ದವು. ಆದರೆ ಇದೀಗ ಕೆಜಿಎಫ್ ಚಿತ್ರ ತಮಿಳುನಾಡು ಬಾಕ್ಸ್ ಆಫೀಸ್ ನಲ್ಲೂ ಧೂಳೆಬ್ಬಿಸುತ್ತಿದ್ದು, 100 ಸ್ಕ್ರೀನ್ ಗಳಲ್ಲಿದ್ದ ಕೆಜಿಎಫ್ ಚಿತ್ರ ತನ್ನ ವ್ಯಾಪ್ತಿಯನ್ನು ಇದೀಗ 300ಕ್ಕೂ ಅಧಿಕ ಸ್ಕ್ರೀನ್ ಗಳಿಗೆ ವಿಸ್ತರಿಸಿದೆ. ಆ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ದರ್ಬಾರ್ ಮುಂದುವರೆಸಿದೆ.
ಪರಭಾಷಾ ಚಿತ್ರಗಳು ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಹೋರಾಡುವ ಸಂದರ್ಭದಲ್ಲಿ ತಮಿಳು ಹೊರತು ಪಡಿಸಿ ಅದರಲ್ಲೂ ಕನ್ನಡ ಭಾಷೆಯ ಚಿತ್ರವೊಂದು ಈ ಮಟ್ಟಿಗೆ ಯಶಸ್ಸು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com