ನಟನೆಯಿಂದ ನಿರ್ದೇಶಕನಕ್ಕೆ ಬಿಗ್ ಬಾಸ್ ಸ್ಪರ್ಧಿ ರಿಶಿಕಾ ಸಿಂಗ್!

ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಶಿಕಾ ಸಿಂಗ್ ಇದೀಗ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ...
ರಿಶಿಕಾ ಸಿಂಗ್
ರಿಶಿಕಾ ಸಿಂಗ್
Updated on
ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಶಿಕಾ ಸಿಂಗ್ ಇದೀಗ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. 
ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಿಶಿಕಾ ಸಿಂಗ್ ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅವರು ಸದ್ಯ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಆಗಸ್ಟ್ 15ರಂದು ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಸದ್ಯಕ್ಕೆ ಕಲಾವಿದರ ಆಯ್ಕೆ ಕೆಲಸಗಳು ನಡೆಯುತ್ತಿವೆ.
ತಮ್ಮ ಚೊಚ್ಚಲ ನಿರ್ದೇಶನದ ಕುರಿತು ಮಾತನಾಡಿರುವ ರಿಶಿಕಾ ಸಿಂಗ್, ಸದ್ಯಕ್ಕೆ ಚಿತ್ರದ ಶೀರ್ಷಿಕೆ ಪ್ರಸ್ತುತತೆ ಮತ್ತು ಯುವ ಸಮೂಹವನ್ನು ನಾಟುವಂತಿರುತ್ತದೆ. ಇದೊಂದು ಯೂತ್ ಫುಲ್ ಲವ್ ಸ್ಟೋರಿ ಆಗಿರಲಿದೆ. ಚಿತ್ರೀಕರಣದ ಸ್ಥಳಗಳ ಆಯ್ಕೆಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 
ಚಿತ್ರಕ್ಕೆ ರಾಜಮಣಿ ಪುತ್ರ ಅಚ್ಚು ರಾಜಮಣಿ ಸಂಗೀತ ಸಂಯೋಜಿಸುತ್ತಿದ್ದು ಇದು ಚಿತ್ರದ ಒಂದು ಹೈಲೈಟ್ ಎಂದು ರಿಶಿಕಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com