ಪ್ರಿಯಾ ಆನಂದ್-ಗಣೇಶ್
ಸಿನಿಮಾ ಸುದ್ದಿ
'ಆರೆಂಜ್' ಚಿತ್ರೀಕರಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಯೂರೋಪ್ ಪ್ರಯಾಣ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಚಿತ್ರೀಕರಣವನ್ನು ಯೂರೋಪ್ ನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಅದರಂತೆ...
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಚಿತ್ರೀಕರಣವನ್ನು ಯೂರೋಪ್ ನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಅದರಂತೆ ಚಿತ್ರತಂಡ ಯೂರೋಪ್ ಗೆ ಹಾರಿದೆ.
ಈ ಹಿಂದೆ ಗಣೇಶ್ ಗೆ ಜೂಮ್ ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಆರೆಂಜ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲ ಭಾಗಗಳು ಹಾಗೂ ಮೂರು ಹಾಡಿನ ಚಿತ್ರೀಕರಣವನ್ನು ಯೂರೋಪ್ ನಲ್ಲಿ ನಡೆಯಲಿದೆ.
10 ದಿನಗಳ ಚಿತ್ರೀಕರಣಕ್ಕಾಗಿ 30 ಮಂದಿ ಚಿತ್ರತಂಡ ಯೂರೋಪ್ ಗೆ ತೆರಳಿದೆ. ಚಿತ್ರಕ್ಕೆ ಎಸ್ಎಸ್ ಥಮನ್ ಸಂಗೀತಿ ಸಂಯೋಜಿಸುತ್ತಿದ್ದು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.

