ಶಿವಣ್ಣ-ವಾಸು ಹೊಸ ಸ್ಟೈಲ್: ಮುಹೂರ್ತದ ದಿನವೇ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಬೆಳವಣಿಗೆ ಎಂದೇ ಹೇಳಬಹುದಾಗಿದೆ, ದ್ವಾರಕೀಶ್ ಚಿತ್ರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52ನೇ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಬೆಳವಣಿಗೆ ಎಂದೇ ಹೇಳಬಹುದಾಗಿದೆ, ದ್ವಾರಕೀಶ್ ಚಿತ್ರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52ನೇ ಸಿನಿಮಾಗೆ ಮುಹೂರ್ತದಂದೇ ರಿಲೀಸ್ ಡೇಟ್ ಫಿಕ್ಸ್ ಮಾಡಲು ಚಿತ್ರತಂಡ  ನಿರ್ಧರಿಸಿದೆ.
ಪಿ. ವಾಸು ನಿರ್ದೇಶದ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದು, ನವೆಂಬರ್ 9 ರಂದು ಸಿನಿಮಾ ಮುಹೂರ್ತ ನೆರವೇರಲಿದೆ. ಡಿಸೆಂಬರ್ 10 ರಿಂದ ಶೂಟಿಂಗ್ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು, ಆಗಸ್ಟ್ 9 2019 ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಅಂದೇ ಸಿನಿಮಾ ರೀಲಿಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಆಕಸ್ಮಿಕವೋ ಎಂಬಂತೆ ಶಿವರಾಜ್ ಕುಮಾರ್ ಅವರ ಮೊದಲನೇ ಚಿತ್ರವಾದ ಆನಂದ್ ಸಿನಿಮಾದ ಟೈಟಲ್ ಈ ಥ್ರಿಲ್ಲರ್ ಸಿನಿಮಾಗೆ ಫೈನಲ್ ಮಾಡಲಾಗಿದೆ, ಶಿವಲಿಂಗ ನಂತರ ಶಿವರಾಜ್ ಕುಮಾರ್ ಮತ್ತು ಪಿ.ವಾಸು ಕಾಂಬಿನೇಷನ್ ನ 2ನೇ ಸಿನಿಮಾ ಇದಾಗಿದೆ, 
ಶಿವಣ್ಣಗೆ ನಾಯಕಿಯಾಗಿ ರಚಿತಾ ರಾಮ್ ಜೊತೆಗಿಯಾಗಿದ್ದಾರೆ, ಯೋಗಿ ದ್ವಾರಕೀಶ್ ನಿರ್ಮಾಣದ ಈ ಸಿನಿಮಾಗೆ ಉಳಿದ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com